Site icon Ullalavani

ನಿವೃತ್ತ ಮುಖ್ಯಶಿಕ್ಷಕ, ಬಂಟರ ಸಂಘ ಉಳ್ಳಾಲ ವಲಯ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರು ಇವರಿಗೆ ಗುರವಂದನಾ ಕಾರ್ಯಕ್ರಮ

ಕೊಣಾಜೆ : ಬಿಜೆಪಿ ಮಂಗಳೂರು ಮಂಡಲದ ಕೊಣಾಜೆ ಮಹಾಶಕ್ತಿ ಕೇಂದ್ರದ ಬೂತ್ ಸಂಖ್ಯೆ 111 ರ ವತಿಯಿಂದ  ಗುರುವಂದನಾ” ಕಾರ್ಯಕ್ರಮವನ್ನು ಶ್ರೀರಾಮಕೃಷ್ಣ ಪ್ರೌಢಶಾಲೆ ಹರೇಕಳದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರವೀಂದ್ರ ರೈ ಕಲ್ಲಿಮಾರು ಇವರ ಕಲ್ಲಿಮಾರು ನಿವಾಸದಲ್ಲಿ ನೆರವೇರಿಸಲಾಯಿತು.


ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತ ಬೈಲು ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲದ ಉಪಾಧ್ಯಕ್ಷರಾದ ಹುಕ್ರಪ್ಪ ನಾಯಕ್ ,ಕೋಶಾಧಿಕಾರಿ ಸುಮಲತಾ ಕೊಣಾಜೆ, ಯುವ ಮೋರ್ಚಾದ ಅಧ್ಯಕ್ಷರಾದ ಮುರಳಿಧರ ಕೋಣಾಜೆ , ರೈತ ಮೋರ್ಚಾದ ಅಧ್ಯಕ್ಷರಾದ ಪದ್ಮನಾಭಗಟ್ಟಿ ಕೊಣಾಜೆ , ಶಕ್ತಿಕೇಂದ್ರದ ಪ್ರಮುಖ ಸನತ್ ಶೆಟ್ಟಿ, ಸ್ಥಳೀಯರಾದ ಅಶೋಕ್ ಉಪಸ್ಥಿತರಿದ್ದರು.

Exit mobile version