ಮಂಗಳೂರು : ಮಂಗಳೂರಿನ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಕೋಶವು “ಉಜ್ವಲ ಭವಿಷ್ಯಕ್ಕಾಗಿ ಮಾರ್ಗದರ್ಶಕರು (ಮೆಂಟರ್) ಮತ್ತು ವಿದ್ಯಾರ್ಥಿಗಳ ಸಂಬಂಧಗಳನ್ನು ಪೋಷಿಸುವುದು” ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ನಡೆಯಿತು.
ಉಡುಪಿಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಖ್ಯಾತ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಈ ಉಪನ್ಯಾಸವನ್ನು ನಡೆಸಿ ಕೊಟ್ಟರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಸರ್ವತೋಮುಖ ಬೆಳವಣಿಗೆಗಾಗಿ ಮಾರ್ಗದರ್ಶಕರು (ಮೆಂಟರ್) ಮತ್ತು ವಿದ್ಯಾರ್ಥಿಗಳ ಸಂಬಂಧಗಳನ್ನು ಯಾವ ರೀತಿಯಲ್ಲಿ ಉತ್ತಮ ಪಡಿಸಬಹುದು ಎಂಬ ವಿಷಯದ ಬಗ್ಗೆ ಈ ಉಪನ್ಯಾಸದಲ್ಲಿ ಚರ್ಚಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂದೀಪ್ ಬೇಕಲ್, ಡಾ.ಸಪ್ನ ಭಂಡಾರಿ, ಡಾ ಗಣೇಶ್ ನಾಯ್ಕ್ ಕೆ ಹಾಗೂ ಬೋಧಕ ವರ್ಗದ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡರು.