Site icon Ullalavani

ಸಮಾಜಮುಖಿ ಕೆಲಸಗಳು ಸಂಘಟನೆಯ ಧ್ಯೇಯವಾಗಬೇಕು: ವಾಸುದೇವರಾವ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಯಾವುದೇ ಒಂದು ವೃತ್ತಿಯಲ್ಲಿ ತೊಡಗಿಕೊಂಡಿರುವವರು ತಮ್ಮ ತಮ್ಮ ಸಂಘಟನೆಗಳನ್ನು ಕಟ್ಟಿಕೊಳ್ಳುವುದು ಸಹಜ. ಆದರೆ ಆ ಸಂಘಟನೆಗಳು ವೃತ್ತಿಯ ಅಭಿವೃದ್ದಿಯಲ್ಲಿ ಮಾತ್ರ ತೊಡಗಿಕೊಳ್ಳದೆ ಸಮಾಜಮುಖಿ ಕಾರ್ಯಗಳನ್ನೂ ಮಾಡಬೇಕು. ಇಂತಹ ಕಾರ್ಯವನ್ನು ಎಸ್ ಕೆಪಿಎ ಉಳ್ಳಾಲ ವಲಯವು ಮಾಡಿರುವುದರಿಂದ ಇಂದು ಸಾರ್ವಜನಿಕ ವಲಯಲದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಫೊಟೊಗ್ರಾಫರ್ಸ್ ಅಸೋಸಿಯೇಶನ್ ನ ಜಿಲ್ಲಾಧ್ಯಕ್ಷ ಕೆ.ವಾಸುದೇವರಾವ್ ಹೇಳಿದರು.

ತೊಕ್ಕೊಟ್ಟಿನಲ್ಲಿರುವ ಕ್ಲಿಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಎಸ್ ಕೆಪಿಎ ಉಳ್ಳಾಲ ವಲಯದ ದ್ವಿತೀಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಳ್ಳಾಲ ವಲಯವು ಇತರ ಹದಿಮೂರು ವಲಯಗಳಂತೆ ತನ್ನ ಸದಸ್ಯರ ಏಳಿಗೆಗಾಗಿ ಶ್ರಮಿಸುತ್ತಿದ್ದು ಪ್ರತಿಯೊಬ್ಬ ಸದಸ್ಯನೂ ಸಂಘಟನೆಯಲ್ಲಿ ತೊಡಗಿಕೊಂಡಿರುವುದರಿಂದ ಕೇವಲ ಎರಡು ವರ್ಷಗಳ ಹಿದೆ ಪ್ರಾರಂಭವಾದ ಈ ವಲಯವರು ಇತರ ವಲಯಗಳಂತೆ ಉತ್ತಮ ಕೆಲಸವನ್ನು ಮಾಡಿಕೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿರುವುದು ಈ ವಲಯದ ಸದಸ್ಯರಲ್ಲಿರುವ ಸಂಘಟನಾತ್ಮಕ ಗುಣವನ್ನು ಎತ್ತಿ ತೋರಿಸುತ್ತಿದೆ ಎಂದರು.

ಈಗಾಗಲೇ ಪ್ರಥಮ ಸಮಿತಿಯ ಎರಡು ವರ್ಷಗಳ ಸೇವಾವಧಿಯು ಮುಗಿದಿದ್ದು ಇವಾಗ ಹೊಸದಾಗಿ ಸಮಿತಿಯ ರಚನೆಯಾಗಿದೆ. ಈ ನೂತನ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ತನ್ನ ಸಂಪೂರ್ಣ ಸಹಕಾರವನ್ನು ನೀಡಿ ಸಂಘವು ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕಾದ ಜವಾಬ್ದಾರಿ ಪ್ರತಿ ಸದಸ್ಯನದ್ದು ಎಂದು ಹೇಳಿದರು.

ಮಹಾಸಭೆಯಲ್ಲಿ 2015-2017ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್ ಕೆಪಿಎ ಉಳ್ಳಾಲ ವಲಯದ ಅಧ್ಯಕ್ಷ ಯು.ಅರುಣ್ ಕುಮಾರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಎಸ್ ಕೆಪಿಎ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಕೋಶಾಧಿಕಾರಿ ಜಗನ್ನಾಥ್ ಶೆಟ್ಟಿ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ವಿಠಲ ಚೌಟ, ಉಳ್ಳಾಲ ವಲಯದ ಸಲಹೆಗಾರರಾದ ದಾಮೋದರ್ ಆಚಾರ್ಯ, ಆನಂದ್ ಎನ್, ಉಳ್ಳಾಲ ವಲಯದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮಾರ್ಲ, ಉಪಾಧ್ಯಕ್ಷ ಉಮೇಶ್ ತೊಕ್ಕೊಟ್ಟು ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸಂತೋಷ್ ಮಾರ್ಲ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ತೀರ್ಥನಾಥ್ ವಾರ್ಷಿಕ ಆಯವ್ಯಯಗಳ ವರದಿಯನ್ನು ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಗೋಪಿನಾಥ್ ಬಗಂಬಿಲ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ತನುಂಜಯ್ ರಾವ್ ವಂದನಾರ್ಪನೆಗೈದರು. ಹರೀಶ್ ಕೊಣಾಜೆ ಮತ್ತು ಡೆಮೆಟ್ರಿಕ್ ಡಿಸೋಜ ಕಾರ್ಯಕ್ರಮವನ್ನು ನಿರ್ವಹಿಸಿದರು.

Exit mobile version