Site icon Ullalavani

ಜಾನುವಾರುಗಳ ಪಾಲಿನ ಯಮರಾಯ ನಟೋರಿಯಸ್‌ ಪಾರಿವಾಳ ಕಬೀರ್ ಕೊಣಾಜೆಯಲ್ಲಿ ಬಂಧನ

ಕೊಣಾಜೆ : ಹಲವು ಪ್ರಕರಣಗಳಲ್ಲಿ ವಾರೆಂಟ್ ಎದುರಿಸುತ್ತಾ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಕಸಬಾ ಬೆಂಗ್ರೆ ನಿವಾಸಿ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರ್ (35) ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಕೊಣಾಜೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಆರೋಪಿ ಬಳಿಯಿಂದ 12 ಗ್ರಾಂ ತೂಕದ ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ವಿರುದ್ಧ ಉಳ್ಳಾಲ, ಕೊಣಾಜೆ, ಕಂಕನಾಡಿ, ಬಜಪೆ, ಪಣಂಬೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಪಶ್ಚಿಮ, ಉಪ್ಪಿನಂಗಡಿ, ಪೊಲೀಸ್ ಠಾಣೆಗಳಲ್ಲಿ ಸೇರಿ ಜಾನುವಾರು ಕಳವಿಗೆ ಸಂಬಂಧಿಸಿ 14 ಪ್ರಕರಣಗಳಿವೆ. ದೇವಸ್ಥಾನವೊಂದರ ಹಸು ಕದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ದಕ್ಷಿಣ ಮತ್ತು ಉತ್ತರ ಠಾಣೆಗಳಲ್ಲಿ ಪ್ರಕರಣವಿದೆ. 2019ರ ಜೂ.30 ರಂದು ಕಸಬಾ ಬೆಂಗ್ರೆಯಿಂದ ಆರೋಪಿಯನ್ನು ಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿತ್ತು. 2022 ರಲ್ಲಿ ಆ.22 ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಸಿಸಿಬಿ ಪೊಲೀಸರ ಮೇಲೆ ದಾಳಿ ನಡೆಸಿದ ಪ್ರಕಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟೋರಿಯಸ್ ಆರೋಪಿ ಪಾರಿವಾಳ ಕಬೀರ್ ನನ್ನು ಈ ಬಾರಿ ಕೊಣಾಜೆ ಠಾಣಾ ವ್ಯಾಪ್ತಿಯಿಂದ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Exit mobile version