Site icon Ullalavani

ಕಲ್ಲರಕೋಡಿ ಶಾಲೆಯಲ್ಲಿ ವಿಶೇಷ ಚೇತನಮಕ್ಕಳ ಜತೆಗೆ ಇರುವ ಕುರಿತ ವಿಶೇಷ ಕರ‍್ಯಗಾರ


ನರಿಂಗಾನ: ಇಲ್ಲಿನ ಕಲ್ಲರಕೋಡಿಯ  ಸರ್ಕಾರಿ ಪ್ರೌಢಶಾಲೆಯಲ್ಲಿ  ವಿಶೇಷ ಚೇತನ ಮಕ್ಕಳ ಜತೆಗೆ ವಿದ್ಯಾರ್ಥಿಗಳು ಯಾವ ರೀತಿ ವರ್ತಿಸಬೇಕು ಅನ್ನುವ ಕುರಿತ ಕರ‍್ಯಗಾರ ನಡೆಯಿತು.


ನಿಟ್ಟೆ ಸ್ಪೆಷಲ್ ಚೈಲ್ಡ್ ಕೇರ್ ಸೆಂಟರ್ ನ ವಿಭಾಗ ಮುಖ್ಯಸ್ಥೆ ಡಾ. ಅಮರಶ್ರೀ ಶೆಟ್ಟಿ ಅವರು  ವಿಶೇಷ ಚೇತನ ಮಕ್ಕಳೊಂದಿಗೆ  ಹೇಗೆ ವ್ಯವಹರಿಸಬೇಕು, ಅವರ ಶಿಕ್ಷಣಕ್ರಮ, ಊಟೋಪಚಾರ ಹಾಗೂ ಅವರನ್ನು ಹೇಗೆ ಆದರಿಸಬೇಕು ಎಂಬುದನ್ನು ವಿಡಿಯೋ ಮೂಲಕ ತೋರಿಸಿ ವಿವರಿಸಿದರು.


ಸ್ಪೆಷಲ್ ಎಜುಕೇಟರ್ ಸಿಂಥಿಯಾ ಡಿಸೋಜ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ  ನಯನ ಕುಮಾರಿ.ಕೆ ವಹಿಸಿದ್ದರು.
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಜೋಗಿ ಸ್ವಾಗತಿಸಿದರು ಹಾಗೂ ಕಾರ್ಯಕ್ರಮ ನಿರೂಪಿಸಿದರು, ಕನ್ನಡ ಶಿಕ್ಷಕಿ ಜಯಲಕ್ಷ್ಮೀ.ಜಿ. ವಂದಿಸಿದರು.

Exit mobile version