Site icon Ullalavani

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ – ವಸತಿಗೃಹದಲ್ಲಿ ದುರ್ಘಟನೆ

ಉಳ್ಳಾಲ : ವಸತಿಗೃಹದ ಮನೆಯ ರೂಮಿನ ಕಿಟಕಿಗೆ ವಿದ್ಯಾರ್ಥಿನಿಯೋರ್ವಳು ಶಾಲಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ. ಬೆಂದೂರ್‌ವೆಲ್ ಖಾಸಗಿ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ಶ್ರೇಯಾ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ತಲಪಾಡಿ ನಾರ್ಲ ನಿವಾಸಿ ಕುಟುಂಬ ಖಾಸಗಿ ಸಂಸ್ಥೆಯ ವಸತಿಗೃಹದಲ್ಲಿ ನೆಲೆಸಿದ್ದರು. ಅಲ್ಲಿಯೇ ಶ್ರೇಯಾ ಮನೆಯ ಬೆಡ್ ರೂಮಿನ ಕಿಟಕಿಗೆ ಶಾಲಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಓದಿನಲ್ಲಿ ಒತ್ತಡ, ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿರುವುದನ್ನು ಡೆತ್‌ನೋಟಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

Exit mobile version