
ಬಾಳೆಪುಣಿ : ಲಜ್ಜೆಗೆಟ್ಟ , ಹೊಣೆಗೇಡಿ, ಅಯೋಗ್ಯ ಕಾಂಗ್ರೆಸ್ ಸರ್ಕಾರ ತೊಲಗಬೇಕು. ಸರಕಾರದ ಖಜಾನೆಯಲ್ಲಿ ಹಣವಿಲ್ಲ. ವಾಲ್ಮೀಕಿ ಹಗರಣದ ಮೂಲಕ 197 ಕೋಟಿ ಬೇರೆ ರಾಜ್ಯ ಚುನಾವಣೆಗೆ ಉಪಯೋಗಿಸಿದರು. ಸಿದ್ಧರಾಮಯ್ಯ ಒಪ್ಪಿಕೊಂಡು 86 ಕೋಟಿ ಹಣವನ್ನು ನೇರ ಬ್ಯಾಂಕಿಗೆ ಜಮಾ ಮಾಡುವ ಮೂಲಕ ನಿಗಮದ ಹಣವನ್ನು ನುಂಗಿದ್ದಾರೆ ಎಂದು ಮಂಡಲದ ರೈತರ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರ್ ಹೇಳಿದ್ದಾರೆ.
ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ದುರಾಡಳಿತ, ಸ್ವಜನ ತುಷ್ಟಿಕರಣ, ಓಲೈಕೆಯ ರಾಜಕಾರಣದ, ಜಾತಿ ರಾಜಕಾರಣದ, ದುಬಾರಿ ಆಡಳಿತದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಜನವಿರೋಧಿ ಸರ್ಕಾರದ ವಿರುದ್ಧ ಬಾಳೆಪುಣಿ ಪಂಚಾಯತ್ ಮುಂಭಾಗದಲ್ಲಿ ಬಿಜೆಪಿ ಕೈರಂಗಳ ಶಕ್ತಿ ಕೇಂದ್ರ ಮತ್ತು ಬಾಳೆಪುಣಿ ಶಕ್ತಿ ಕೇಂದ್ರದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪತ್ನಿ ಹೆಸರಿನಲ್ಲಿ ಇದ್ದಂತಹ ಬೆಲೆಬಾಳುವ 14 ಸೈಟ್ ಮಾಡಿ ಬಳಿಕ ಭ್ರಷ್ಟಾಚಾರ ಆರೋಪ ಕೇಳಿಬಂದ ನಂತರ ವಾಪಸ್ಸು ಕೊಟ್ಟಿದ್ದಾರೆ. ಕಾನೂನು ಎಂಬುದನ್ನು ಅವರಿಗವರೇ ಮಾಡುವ ಸ್ಥಿತಿಯಿದೆ. ಬಿಜೆಪಿ ಸರಕಾರ ಸಕಾಲವನ್ನು ಚಾಲ್ತಿಗೆ ತಂದಿದ್ದರು. ಅದನ್ನೂ ಕಾರ್ಯನಿರ್ವಹಿಸದಂತೆ ಮಾಡುವ ಮೂಲಕ ಜನಸಾಮಾನ್ಯರನ್ನು ಕಷ್ಟದ ಸುಳಿವಿಗೆ ಸಿಲುಕಿಸಿದೆ ಎಂದರು.
ಮಂಡಲ ಉಪಾಧ್ಯಕ್ಷ ಸುಮನಾ ಹರೀಶ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಪ್ರಮುಖರಾದ ನಂದರಾಜ್ ಶೆಟ್ಟಿ, ಜಿಲ್ಲಾ ವ್ಯಾಪಾರ ಪ್ರಕೋಷ್ಟದ ಯೋಗೀಶ್ ಕಣಂತೂರು , ವಿಧಾನ ಪರಿಷತ್ ನ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹಾಗೂ ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್ ಇವರುಗಳು ಭೇಟಿ ನೀಡಿದರು.