
ಕೋಟೆಕಾರುಕೋಟೆಕಾರು: ಬಡವರ್ಗ, ರೈತರು ಸಿದ್ಧರಾಮಯ್ಯ ಸರಕಾರವನ್ನು ತಿರಸ್ಕರಿಸಲೇ ಬೇಕಿದೆ. 9/11 ಗಾಗಿ ಇಡೀ ಬಡ ಜನತೆ ಮುಡಾ ಹೋಗಿ ಅಲೆದಾಡುವಂತಾಗಿದೆ. ಭ್ರಷ್ಟಾಚಾರದ ಕೂಪದಿಂದ ಕೂಡಿದ ಮುಡಾ ವ್ಯವಸ್ಥೆಗೆ ಸಾಮಾನ್ಯ ಜನ ತೆರಳಿ ನರಕಯಾತನೆ ಅನುಭವಿಸಬೇಕಾಗಿದೆ ಎಂದು ಮಂಗಳೂರು ಮಂಡಲ ಪ್ರಧಾನ ಕರ‍್ಯದರ್ಶಿ ಮೋಹನ್ ರಾಜ್ ಕೆ.ಆರ್ ಆರೋಪಿಸಿದರು.
ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಮುಂದೆ ಆಯೋಜಿಸಲಾದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಕೋಟೆಕರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಎಸ್ ಶೆಟ್ಟಿ . ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಶೆಟ್ಟಿ ಸುಳ್ಳೆಂಜಿರು , ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಯಶವಂತ್ ಆಳ್ವ, ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿ ಗಳಾದ ರವಿ ಸೋವೂರ್, ಸಂಪತ್ ಕುಕ್ಯಾನ್, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕೊಂಡಾಣ, ಬಿಜೆಪಿ ಮಂಗಳೂರು ಮಂಡಲ ಕಚೇರಿ ಕಾರ್ಯದರ್ಶಿ ಸುಜಾತ ಬಿ ಶೆಟ್ಟಿ, ಬಿಜೆಪಿ ಕೋಟೆಕಾರು ಮಹಾ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅತುಲ್ ಬಗಂಬಿಲ, ಬಿಜೆಪಿ ಮಹಾಶಕ್ತಿ ಕೇಂದ್ರ ಪ್ರಮುಖರಾದ ಶಂಕರ್ ನಾರಾಯಣ ಆಚಾರ್ಯ, ಪ್ರವೀಣ್ ಶೆಟ್ಟಿ ಸಂಪಿಗೆ, ದೇವೀಶ್ ಪೂಜಾರಿ, ಶಕ್ತಿ ಕೇಂದ್ರ ಪ್ರಮುಖರಾದ ನಿತಿನ್ ಪೂಜಾರಿ, ಶರತ್ ಶೆಟ್ಟಿ. ಕೌನ್ಸಿಲರುಗಳಾದ ಸುಜಿತ್ ಮಾಡೂರು. ರಾಘವ ಗಟ್ಟಿ, ಭವಾನಿ ದೇವದಾಸ್, ಅನಿತ, ಧೀರಜ್ ಕುಸಾಲ್ ನಗರ, ಮಂಡಲ ರೈತ ಮೋರ್ಚಾ ಕಾರ್ಯದರ್ಶಿ ಪದ್ಮನಾಭ ಗಟ್ಟಿ, ಕಾರ್ಯಕಾರಿಣಿ ಸದಸ್ಯ ಪದ್ಮನಾಭ ಪಾದೆ, ಯುವಮೋರ್ಚಾ ಮಂಡಲ ಕಾರ್ಯದರ್ಶಿ ಗಣೇಶ್ ಭಂಡಾರಿ ಮಡ್ಯಾರ್ ಮಹಿಳಾಮೋರ್ಚ ಮಂಡಲ ಕಾರ್ಯಕಾರಿಣಿ ಸದಸ್ಯೆ ಹೇಮಾ, ರವೀಂದ್ರ ಶೆಟ್ಟಿ ಬಾಯಾರ್ ತೋಟ, ಪುರುಷೋತ್ತಮ ಗಟ್ಟಿ, ಪ್ರವೀಣ್ ಕುಮಾರ್ ಬಾಯಾರ್ ತೋಟ, ರಾಜೇಶ್ ಮಡ್ಯಾರ್ ,ಅರ್ಜುನ್ ಮಾಡೂರ್, ಪ್ರಿಯಾ ಬಂಗೇರ, ಪುಷ್ಪಲತ ಗಟ್ಟಿ, ಪಾರ್ವತಿ ಮುರಳಿ, ಉದಯ ರಾವ್ ಕೊಂಡಾಣ, ರಾಹುಲ್ ಮೊದಲಾದ ಕರ‍್ಯಕರ್ತರು ಭಾಗಿಯಾಗಿದ್ದರು.