ಮಂಜನಾಡಿ : ಕರ್ನಾಟಕ ರಾಜ್ಯ ಸರಕಾರ ಸಂಪೂರ್ಣ ವೈಫಲ್ಯ ವಾಗಿದೆ, ಗ್ರಾಮ ಪಂಚಾಯತ್ ಅಧಿಕಾರವನ್ನು ಮೊಟುಕು ಗೊಳಿಸಿ ಸಾಮಾನ್ಯವಾದ 9/11 ಪಡೆಯುವುದನ್ನು ಸಹಿತ ಕಠಿಣ ಗೊಳಿಸಿದೆ. ವಿಪರೀತ ತೆರಿಗೆ ಸಂಗ್ರಹ ಹೆಚ್ಚಳ, ಪಡಿತರ ಚೀಟಿ ಹಂಚಿಕೆ ಮಾಡದೆ ಬಡ ನಾಗರಿಕರ ನೆಮ್ಮದಿ ಹಾಳು ಮಾಡಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರಾದ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಹೇಳಿದ್ದಾರೆ.
ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಮಂಜನಾಡಿ ಗ್ರಾಮ ಪಂಚಾಯತ್ ಮುಂದೆ ಬಿಜೆಪಿ ಮಂಜನಾಡಿ ಮಹಾ ಶಕ್ತಿ ಕೇಂದ್ರದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮಂಗಳೂರು ಮಂಡಲ ಮಾಜಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮಂಡಲ ಕಾರ್ಯದರ್ಶಿ ರಮೇಶ್ ಬೆದ್ರೊಳಿಕೆ. ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಜೀವನ್ ಪ್ರಕಾಶ್, ಶಕ್ತಿ ಕೇಂದ್ರ ಪ್ರಮುಖ ರಂಜಿತ್ ಸುಲಾಯ, ಬಾಲಕೃಷ್ಣ ಹರೀಶ್ ಪೂಜಾರಿ, ನವೀನ್ ಶೆಟ್ಟಿ, ಉದಯ್ ಶೆಟ್ಟಿ, ಪ್ರೇಮಾನಂದ ರೈ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆ ನಂತರ ಮನವಿಯನ್ನು ಪಂಚಾಯತ್ ಕಾರ್ಯದರ್ಶಿಯವರಿಗೆ ಸಲ್ಲಿಸಲಾಯಿತು.
