Site icon Ullalavani

ಕಲ್ಲರಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ

ನರಿಂಗಾನ : ಸರ್ಕಾರಿ ಪ್ರೌಢಶಾಲೆ ಕಲ್ಲರಕೋಡಿ ಇಲ್ಲಿ ಯೋಗ ದಿನಾಚರಣೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನವಾಝ್.ಎಂ‌.ಬಿ ಅವರು ಉದ್ಘಾಟಿಸಿದರು. ಸರ್ಕಾರಿ ಪ್ರೌಢಶಾಲೆ ಕಲ್ಲರಕೋಡಿಯ ಮುಖ್ಯ ಶಿಕ್ಷಕಿ ನಯನಕುಮಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೀರಾ ಎಂ.ವಿ, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಸರ್ವ ಶಿಕ್ಷಕರು ಉಪಸ್ಥಿತರಿದ್ದರು.


ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಟೀಚರ್ ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಯೋಗ ತರಗತಿಯನ್ನು ನಡೆಸಿಕೊಟ್ಟರು, ಪ್ರೌಢಶಾಲಾ ಹಿರಿಯ ಶಿಕ್ಷಕಿ ಸೀಮಾ ಮರಿಯಾ ಡಿಸೋಜ ಸ್ವಾಗತಿಸಿದರು, ಪ್ರಾಥಮಿಕ ಶಾಲಾ ಶಿಕ್ಷಕ ರಘು ವಂದಿಸಿದರು.

Exit mobile version