Site icon Ullalavani

ಮಾದಕ ವಸ್ತು ಗಾಂಜಾ ಮಾರಾಟ: ಆರೋಪಿ ಬಂಧನ

ಉಳ್ಳಾಲ: ಮಾದಕ ವಸ್ತು ಗಾಂಜಾ ಮಾರಾಟ ನಡೆಸಲು ಯತ್ನಿಸುತ್ತಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಸೋಮೇಶ್ವರ ಸಮುದ್ರ ತೀರದಿಂದ ಬಂಧಿಸಿದ್ದಾರೆ.
ಮೂಲತ: ಬೈಲುಕುಪ್ಪೆಯ ,ಹಾಲಿ ಕಾರವಾರ ಮುಂಡಗೋಡು 8ನೇ ಕ್ಯಾಂಪ್ ನ ನಿವಾಸಿ ತೆನ್ಝಿನ್ ಥಿನ್ಲೆಯ್ (30) ಬಂಧಿತ. ಈತ ಜೂ.20 ರಂದು ಸೋಮೇಶ್ವರ ಗ್ರಾಮದ ಸೋಮೇಶ್ವರ ಬೀಚ್ ಪರಿಸರದಲ್ಲಿ ಆರೋಪಿ ತೆನ್ಸಿನ್ ಥಿನ್ಲೆಯ್ ಎಂಬಾತನು ಅಲ್ಲಿನ ಪರಿಸರದಲ್ಲಿ ಓಡಾಡುವ ಸಾರ್ವಜನಿಕರನ್ನು ಗುಪ್ತವಾಗಿ ಆತನ ಬಳಿಗೆ ಕರೆದು ಆತನು ಕೈಯಲ್ಲಿ ಹಿಡಿದುಕೊಂಡಿದ್ದ ಪ್ಲಾಸ್ಟಿಕ್ ಕಟ್ಟೊಂದರಲ್ಲಿ ತುಂಬಿಸಿದ್ದ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಬಂಧಿತನಿAದ ರೂ.7,000 ಮೌಲ್ಯದ ಸುಮಾರು 290 ಗ್ರಾಂ ತೂಕದ ನಿಷೇಧಿತ ಗಾಂಜಾ , 22 ಝಿಪ್‌ಲಾಕ್ ಟ್ರಾನ್ಪರೆಂಟ್ ಖಾಲಿ ಕವರುಗಳು, ಇಲೆಕ್ಟಾçನಿಕ್ ತೂಕ ಮಾಪನ ಹಾಗೂ ಒಂದು ಮೊಬೈಲ್ ಒಟ್ಟು ರೂ.22,510 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಿರುದ್ಧ ಎನ್ ಡಿಪಿಎಸ್ ಕಾಯಿದೆ 1985 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್, ಡಿಸಿಪಿ ಸಿದ್ದಾರ್ಥ್ ಗೋಯಲ್, ಕೆ.ರವಿಶಂಕರ್ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಪ್ರಕಾಶ್ ಕೆ.ಸಿ ನೇತೃತ್ವದಲ್ಲಿ ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ , ಉಪನಿರೀಕ್ಷಕರುಗಳಾದ ಕೃಷ್ಣ ಕೆ.ಹೆಚ್, ಸಂತೋಷ್, ಸಿಬ್ಬಂದಿಗಳಾದ ಮಂಜುನಾಥ್, ಆನಂದ್, ಅಶೋಕ್ ಭಾಗವಹಿಸಿದ್ದರು.
ಘಟನೆ ಕುರಿತು ಮಾಹಿತಿ ಪಡೆದ ಉಳ್ಳಾಲ ಶಾಸಕರು, ಸ್ಪೀಕರ್ ಯು.ಟಿ.ಖಾದರ್ ಅವರು ಆರೋಪಿಯ ಸಮಗ್ರ ವಿಚಾರಣೆ ನಡೆಸುವಂತೆ ಸಹಾಯಕ ಪೊಲೀಸ್ ಆಯುಕ್ತ ಪ್ರಕಾಶ್ ಅವರಿಗೆ ಸೂಚಿಸಿದ್ದಾರೆ. ಪ್ರಕರಣದ ಹಿಂದೆ ಇರುವ ಸೂತ್ರಧಾರಿಗಳನ್ನು ಶೀಘ್ರವೇ ಬಂಧಿಸುವAತೆಯೂ, ಅಮಲು ಪದಾರ್ಥಗಳು ಬರುವ ಮೂಲಗಳನ್ನು ಪತ್ತೆಹಚ್ಚುವಂತೆಯೂ ಸೂಚಿಸಿದ್ದಾರೆ. ಅಲ್ಲದೆ ಗಾಂಜಾ ವ್ಯಸನಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸದೇ ಹೆತ್ತವರನ್ನು ಕರೆಸಿ ಸಮಾಲೋಚಿಸಿವಂತೆಯೂ ಸೂಚಿಸಿದ್ದಾರೆ.

Exit mobile version