Site icon Ullalavani

ಆಕಸ್ಮಿಕ ನಿಧನ ಹೊಂದಿದ ಯೋಗೀಶ್ ಕುತ್ತಾರ್ ಶ್ರದ್ಧಾಂಜಲಿ ಸಭೆ

ಉಳ್ಳಾಲ: ಇತ್ತೀಚೆಗೆ ಆಕಸ್ಮಿಕವಾಗಿ ಸಾವನ್ನಪ್ಪಿದ ಕುತ್ತಾರಿನ ಶ್ರೀ. ಜೈ ಹನುಮಾನ್ ಕ್ರೀಡಾ ಮಂಡಳಿಯ ಕ್ರೀಡಾ ಕಾರ್ಯದರ್ಶಿ , ಡಿವೈಎಫ್‌ಐ ಮುನ್ನೂರು ಘಟಕ ಸಮಿತಿ ಸದಸ್ಯ , ವಿನಾಯ ಫ್ರೆಂಡ್ಸ್ ನ ಸದಸ್ಯರಾಗಿದ್ದ ಯೋಗೀಶ್ ಕುತ್ತಾರ್ ಇವರಿಗೆ ಶ್ರದ್ಧಾಂಜಲಿ ಸಭೆ ತೇವುಲ ಕಾರ್ದಿ ಕಂಡದಲ್ಲಿ ನಡೆಯಿತು.
ಕುತ್ತಾರು ಮುನ್ನೂರು ಪ್ರದೇಶದ ಯುವಜನ ವಲಯದಲ್ಲಿ ಬಾರೀ ಜನಾನುರಾಗಿಯಾಗಿ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಈ ಶ್ರದ್ಧಾಂಜಲಿ ಸಭೆಯಲ್ಲಿ ಯುವ ಜನ ಮುಖಂಡರುಗಳಾದ ಡಾ. ಜೀವನ್ ರಾಜ್ ಕಂಪ, ವಕೀಲ ನಿತಿನ್ ಕುತ್ತಾರ್. ಸಿಪಿಎಂ ಮುಖಂಡ ಕೃಷ್ಣಪ್ಪ ಸಾಲಿಯಾನ್. ವಿಶ್ವನಾಥ್ ತೇವುಲ ಶೇಖರ್ ಬಟ್ಟೆದಡಿ. ಸುನಿಲ್ ತೇವುಲ. ಕರುಣಾಕರ ಕಂಪ. ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹಾಬಲ ಬಟ್ಟೆದಡಿ. ಪಂಚಾಯತ್ ಸದಸ್ಯರುಗಳಾದ ರಾಜೇಶ್ವರಿ. ಗಣೇಶ್ ಅಡ್ಯಂತಾಯ.ದಿವ್ಯಾರಾಜ್ ತೇವುಲ ಉಪಸ್ಥಿತರಿದ್ದರು.

Exit mobile version