Site icon Ullalavani

ನಾಳೆ ಶ್ರೀ ಬಾಲಕೃಷ್ಣ ಮಂದಿರದಲ್ಲಿ ‘ಜ್ಞಾನ ದೀವಿಗೆ ಪುರಸ್ಕಾರ’ ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ

ಕುಂಪಲ : ಇಲ್ಲಿನ ಶ್ರೀ ಬಾಲಕೃಷ್ಣ ಮಂದಿರ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 90%ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾಶಾಲಿ ವಿದ್ಯಾರ್ಥಿಗಳಿಗೆ ‘ಜ್ಞಾನ ದೀವಿಗೆ ಪುರಸ್ಕಾರ’ ನೀಡುವ ಕಾರ್ಯಕ್ರಮ ಜೂನ್ 15, 2025, ಭಾನುವಾರ ಸಂಜೆ 5.30ಕ್ಕೆ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ನಡೆಸಲಾಗುತ್ತಿದ್ದು, ದೀಪ ಪ್ರಜ್ವಲನೆ ಕಾರ್ಯವನ್ನು ಡಾ. ಕೆ.ಸಿ. ನಾಯ್ಕ (ಆಡಳಿತಾಧಿಕಾರಿಗಳು, ಶಕ್ತಿ ಎಜ್ಯುಕೇಶನ್ ಸೊಸೈಟಿ, ಶಕ್ತಿನಗರ, ಮಂಗಳೂರು) ನೆರವೇರಿಸಲಿದ್ದಾರೆ.
ಪ್ರಮುಖ ಅತಿಥಿಯಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಜ್ಞಾನ ದೀವಿಗೆ ಪುರಸ್ಕಾರವನ್ನು ಪ್ರಧಾನ ಮಾಡಲಿದ್ದಾರೆ.ಸ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದವ ಕೋಟ್ಯಾನ್, ಉದ್ಯಮಿ, ಪೆರ್ಮುದೆ, ಮುಖ್ಯ ಅತಿಥಿಗಳಾಗಿ ಜಗದೀಶ್ ಆಳ್ವ, ಅಧ್ಯಕ್ಷರು, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ , ಗಿರೀಶ್ ಉಳ್ಳಾಲ್, ನಿವೃತ್ತ ಬ್ಯಾಂಕ್ ಅಧಿಕಾರಿ, ಕಾಪಿಕಾಡ್,
ಚಂದ್ರಶೇಖರ್ ಗಟ್ಟಿ, ಉದ್ಯಮಿ, ಮುಡಿಪು, ರಂಜನ್ ಶೆಟ್ಟಿ, ನಿರ್ದೇಶಕರು, ಕುಡ್ಲ ಚಿಟ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು, ಗಂಗಾ ಆನಂದ್, ಅಧ್ಯಕ್ಷರು, ಬ್ರಹ್ಮಶ್ರೀ ಬಿಲ್ಲವ ಮಹಿಳಾ ವೇದಿಕೆ, ತೊಕ್ಕೊಟ್ಟು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವು ವಿದ್ಯೆಯ ಪ್ರೇರಣಾದಾಯಕ ಕ್ಷಣವಾಗಿದ್ದು, ವಿದ್ಯಾರ್ಥಿಗಳ ಶ್ರಮಕ್ಕೆ ಗೌರವ ಸಲ್ಲಿಸುವ ಗೌರವವಾಗಿದೆ. ಶ್ರೀ ಬಾಲಕೃಷ್ಣ ಮಂದಿರ (ರಿ.), ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ, ಶ್ರೀ ಬಾಲಕೃಷ್ಣ ಮಹಿಳಾ ಸೇವಾ ಸಮಿತಿ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಸಂಘಟಕರು: 9449080824, 9972124706, 9901559411

Exit mobile version