Site icon Ullalavani

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲದ ಶ್ರಾವಣ್ ಉಳ್ಳಾಲ್‌ಗೆ ಅಂತರಾಷ್ಟ್ರೀಯ ಸಾಧಕ ಪ್ರಶಸ್ತಿ

ಉಳ್ಳಾಲ : ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಸುವರ್ಣ ಮಹೋತ್ಸವ ಸಂಭ್ರಮ – 2025 ಪ್ರಯುಕ್ತ 50ನೇ ವಾರ್ಷಿಕ ಆರ್ಯಭಟ ಪ್ರಶಸ್ತಿ ಪ್ರಧಾನ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಸ್ಥಾಪಕ ಅಧ್ಯಕ್ಷ ವಿದ್ವಾನ್ ಶ್ರಾವಣ್ ಉಳ್ಳಾಲ್ ಇವರಿಗೆ ಅಂತರಾಷ್ಟ್ರೀಯ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಡಾ| ಹೆಚ್.ಎಲ್ ಎನ್ ರಾವ್ ಸ್ಥಾಪಿಸಿದ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ 50ನೇ ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಗೌರವಾನ್ವಿತ ನ್ಯಾಯಮೂರ್ತಿ ಡಾ. ಅಶೋಕ್ ಬಿ ಹಿಂಚಿಗೇರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿ ಕಳೆದ 50 ವರ್ಷಗಳಲ್ಲಿ ಸಾಧಿಸಿ ಗೌರವಿಸುವವರ ಕಾರ್ಯ ಎಲ್ಲರಿಗೂ ಮಾದರಿ, ಕಾರ್ಯಶ್ರದ್ಧೆಗೆ ಮೆಚ್ಚುಗೆ
ಮ್ಯಾನ್ ಹೂ ಮೇಕ್ಸ್ ಟೈಟಲ್ ಅಂದಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ . ಗೌರವ ಸ್ವೀಕರಿಸಿದವರಿಂದ ಪ್ರಶಸ್ತಿಗೆ ಬೆಲೆ, ತೂಕ, ಮೌಲ್ಯ ಘನತೆ ಬಂದಿದೆ. ಮಹಿಳಾ ಸಬಲೀಕರಣ, ವಯೋವೃದ್ಧರು, ಯುವಸಮುದಾಯವನ್ನು ಸಮಾಜದಲ್ಲಿ ಗುರುತಿಸುವ ಕಾರ‍್ಯ ಮಹತ್ತರವಾದದ್ದು. ಅವರಿಗೂ ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ಸಮಾಜ ಗುರುತಿಸಿದೆ, ಮನ್ನಣೆಯನ್ನು ನೀಡಿದೆ ಅನ್ನುವ ಸಂತಸವನ್ನುಂಟು ಮಾಡುತ್ತದೆ ಎಂದರು.
ಸಂಸ್ಥೆ ಸ್ಥಾಪಕ ಡಾ| ಹೆಚ್.ಎಲ್ ಎನ್ ರಾವ್ ಮಾತನಾಡಿ, ಆರ್ಯಭಟ ಉಡಾವಣೆಯಾದ ನೆನಪಿನಲ್ಲಿ ಸಂಸ್ಥೆ ಆರಂಭಿಸಲಾಗಿದೆ. 1975ರಲ್ಲಿ ಎ.19ರಂದು ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪನೆಯ ದಿನದಂದು ಆರಂಭಿಸಿದ ಸಂಸ್ಥೆ ಇದೀಗ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದರು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ಉಪಸ್ಥಿತರಿದ್ದರು.
ಈ ಸಂದರ್ಭ ಪದ್ಮಶ್ರೀ ಪುರಸ್ಕೃತ ಭಾರತಿ ವಿಷ್ಣುವರ್ಧನ್ , ಮಾಜಿ ಸಚಿವೆ , ನಟಿ ಡಾ.ಜಯಮಾಲಾ, ನಿರ್ದೇಶಕ, ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು, ಪ್ರೇಮ ಕವಿ ಕೆ.ಕಲ್ಯಾಣ್ ಇವರಿಗೆ ಸುವರ್ಣ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.
75 ಮಂದಿ ಸಾಧಕರಿಗೆ ಅಂತರಾಷ್ಟ್ರೀಯ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದರಲ್ಲಿ ಕರಾವಳಿಯ ಸಾಧಕರುಗಳಾದ ದುಬಯ್ಯ, ದೀಪಕ್ ಎಸ್.ಪಿ, ಸಚ್ಚಿದಾನಂದ ಶೆಟ್ಟಿ, ಕಡಬ ಶ್ರೀನಿವಾಸ ರೈ, ವಿದ್ವಾನ್ ಶ್ರಾವಣ್ ಉಳ್ಳಾಲ್, ಕೆ.ಜಯರಾಮ್ ಶೇಖ, ವಿಶ್ವನಾಥ್ ಪೂಜಾರಿ ಕಡ್ತಲ, ಸಚ್ಚಿದಾನಂದ ಶೆಟ್ಟಿ, ಪಣಿಯೂರು ಕರುಣಾಕರ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

Exit mobile version