ಉಳ್ಳಾಲ : ಬಿಜೆಪಿ ಮಂಗಳೂರು-204 ಮಂಡಲದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಗದೀಶ್ ಆಳ್ವ ಕುವೆತ್ತಬೈಲ್ ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಬೆನ್ನಲ್ಲೇ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಯಶವಂತ್ ದೇರಾಜೆ , ಸೋಮೇಶ್ವರ ಪುರಸಭೆ ಉಪಾಧ್ಯಕ್ಷರು, ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ರವಿಶಂಕರ್ ಸೋಮೇಶ್ವರ , ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸುರೇಶ್ ಆಳ್ವ ಸಾಂತ್ಯಗುತ್ತು, ಚಿನ್ನದ ಕೆಲಸ ನಿರ್ವಹಿಸುತ್ತಿರುವ ಮಾರಿಪಲ್ಲ ನಿವಾಸಿ ಮನೋಜ್ ಆಚಾರ್ಯ , ಕೃಷಿಕರು, ಬಾಳೆಪುಣಿಯ ಸುಮನ ಹರೀಶ್ ಶೆಟ್ಟಿ , ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಅಧಿಕಾರಿ ಹುಕ್ರಪ್ಪ ನಾಯ್ಕ್ ಬಿ. ಸಣ್ಣಪದವು ಉಪಾಧ್ಯಕ್ಷರಾಗಿ ಆಯ್ಕೆಗೊಂಡರೆ, ಪ್ರಧಾನ ಕಾರ‍್ಯದರ್ಶಿಗಳಾಗಿ ವಕೀಲರು ಮಾಡೂರು ನಿವಾಸಿ ಮೋಹನ್ ರಾಜ್ ಕೆ ಆರ್ , ಸಿವಿಲ್ ಗುತ್ತಿಗೆದಾರರಾಗಿರುವ ತೊಕ್ಕೊಟ್ಟು ನಿವಾಸಿ ದಯಾನಂದ ತೊಕ್ಕೊಟ್ಟು ಆಯ್ಕೆಯಾದರೆ, ಕಾರ‍್ಯದರ್ಶಿಗಳಾಗಿ ಸಿವಿಲ್ತೊ ಗುತ್ಡತಿಗೆದಾರರಾಗಿರುವ ರಮೇಶ್ ಬೆದ್ರೋಳಿಕೆ, ಕೊಣಾಜೆ ಕಟ್ಟೆಪುಣಿ ನಿವಾಸಿ, ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯ ಭರತ್ ರಾಜ್ ಗಟ್ಟಿ, ಮುನ್ನೂರು ಸಂತೋಷನಗರದ ಸ್ವಂತ ಉದ್ಯಮ ನಿರ್ವಹಿಸುತ್ತಿರುವ ಕಿಶೋರ್ ಕುಮಾರ್, ಸೋಮೇಶ್ವರ ಉಚ್ಚಿಲದ , ಮರದ ಕೆಲಸ ನಿರ್ವಹಿಸುವ ರಾಜೇಶ್ ಜಾಲಹಿತ್ಲು, ರಾಣಿಪುರ ನಿವಾಸಿ ಟೈಲರ್ ವೃತ್ತಿ ನಿರ್ವಹಿಸುತ್ತಿರುವ ಸುರೇಖಾ ಅಜಿತ್ ಕುಮಾರ್ , ಬಿಲ್ಲವ ಸಮಾಜದ ಉಳ್ಳಾಲ ಬಸ್ತಿಪಡ್ಪುವಿನ ಗೃಹಿಣಿಯಾಗಿರುವ ಸತ್ಯವತಿ ಜಿ.ಕೆ.ಉಳ್ಳಾಲ್ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಉಪನ್ಯಾಸಕಿ ಸುಮಲತಾ ಕೊಣಾಜೆ ಹಾಗೂ ಕಾರ‍್ಯಾಲಯ ಕಾರ‍್ಯದರ್ಶಿಗಳಾಗಿ ಸುಜಾತ ಬಿ ಶೆಟ್ಟಿ ಆಯ್ಕೆಯಾಗಿದ್ದಾರೆ.
