ಉಳ್ಳಾಲ : ತುಳುನಾಡಿನ ಸಂಸ್ಕತಿ, ಸಿದ್ದಮರ್ಧ ಬೈದ್ಯರ ಬಗೆಗಿನ ಅಧ್ಯಯನ, ಭಜನೆ ಹಿಂದುಸ್ತಾನಿ ಸಂಗೀತ, ಪರಿಸರ ಕಾಳಜಿ ಪೊಟೊ ಫ್ರೇಮ್ ಉದ್ಯಮಗಳಮೂಲಕ ಜನಪ್ರಿಯರಾಗಿದ್ದ ರಮಾನಾಥ ಕೋಟೆಕಾರ್ ಅವರ ಆದರ್ಶವನ್ನು ಮುಂದುವರಿಸಿ ಎಂದು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಡಿ ಕಾಪಿಕಾಡ್ ಹೇಳಿದರು.
ಉಳ್ಳಾಲದ ಸುದ್ದಿ ವಾಹಿನಿಯೊಂದರ ಹದಿಮೂರನೇ ವಾರ್ಷಿಕೋತ್ಸವದ ಸಂದರ್ಭ ಹದಿಮೂರು ಗೌರವ ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದ ಬೆಂಗಳೂರು ಸಾಗರ್ ಆಸ್ಪತ್ರೆಯ ಮಕ್ಕಳ ತಜ್ಞೆ ಸಾಯೀಕ್ಷ ಕೋಟೆಕಾರ್ ಅವರನ್ನು ಗೌರವಿಸಿ ಅವರು ಮಾತನಾಡಿದರು.
ಸಿದ್ದಮರ್ದ ಬೈದ್ಯರು ಮತ್ತು ವೀರ ರಾಣಿ ಅಬ್ಬಕ್ಕಳ ಅನ್ಯೋನ್ಯತೆ, ಬರಗಾಲದ ಸಂದರ್ಭದಲ್ಲಿ ಬೈದ್ಯರು ಪರ್ಜನ್ಯ ಯಾಗದ ಮೂಲಕ ಮಾಡಿದ ಅಧ್ಯಾತ್ಮಿಕ ಸಾಧನೆ ಇವೆಲ್ಲವನ್ನೂ ರಮಾನಾಥ ಕೋಟೆಕಾರ್ ಅಧ್ಯಯನ ಯೋಗ್ಯವಾಗಿ ಸಮಾಜದ ಮುಂದಿಟ್ಟಿದ್ದಾರೆ. ಹಿಂದುಸ್ತಾನಿ ಗಾಯಕರೂ, ಹಿನ್ನೆಲೆ ಕಲಾವಿದರೂ ಆಗಿದ್ದರು ,ಇವರ ಪರಿಸರ ಪ್ರೇಮವೂ ಗಮನಾರ್ಹ ಎಂದರು.
ಹೆಸರಾಂತ ಮೂಳೆತಜ್ಞರಾದ ಡಾ.ಲಕ್ಷ್ಮಣ್ ಕೋಟೆಕಾರ್, ಪ್ರಸೂತಿ ತಜ್ಞರಾದ ಡಾ.ಪ್ರಮೋದ ಎಲ್, ಮೊಗವೀರ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ವೇದಾವತಿ ಕೋಟೆಕಾರ್ ಈ ವೇಳೆ ಮಾತನಾಡಿ ಸಾಯೀಕ್ಷಾ ಅವರನ್ನು ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸಾಯೀಕ್ಷ ಆರ್ ಕೋಟೆಕಾರ್ ಸದ್ಯ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ, ಮುಂದಕ್ಕೆ ನಮ್ಮೂರಲ್ಲೇ ಅವಕಾಶ ಸಿಕ್ಕಿದರೆ ಮಕ್ಕಳ ಸೇವೆ ಮಾಡಿದ ತಂದೆಯವರ ಉದಾತ್ತ ಜೀವನದ ಒಂದಂಶವನ್ನಾದರೂ ನಡೆಸಲು ಆಶೆಯಿದೆ ಎಂದರು
ಅಬ್ಬಕ್ಕ ಟಿ.ವಿಯ ನಿರ್ದೇಶಕರಾದ ಶಶಿಧರ್ ಪೊಯ್ಯತಬೈಲ್ ಕಾರ್ಯಕ್ರಮ ನಿರೂಪಿಸಿದರು. ಎಚ್ ಟಿ ಶಿವ ಕುಮಾರ್ ಸ್ವಾಗತಿಸಿ ಆಶಾ ಆರ್ ಧನ್ಯವಾದವಿತ್ತರು.