Site icon Ullalavani

ಜೂ.11 ಸ್ಪೀಕರ್‌ ಯು.ಟಿ.ಖಾದರ್‌ ಹಜ್‌ ಯಾತ್ರೆಯಿಂದ ವಾಪಸ್‌

ಮಂಗಳೂರು: ಪವಿತ್ರ ಹಜ್ ಯಾತ್ರೆಯಲ್ಲಿರುವ ಸ್ಪೀಕರ್ ಯು.ಟಿ.ಖಾದರ್ ಜೂ.11ರಂದು ದ.ಕ.ಜಿಲ್ಲೆಗೆ ಮರಳಲಿದ್ದಾರೆ.
ಮಕ್ಕಾದಿಂದ ನೇರ ಮಂಗಳೂರಿಗೆ ಆಗಮಿಸಲಿರುವ ಅವರು ಜೂ.11ರಂದು ಬೆಳಗ್ಗೆ 9ಕ್ಕೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ  ಸಾರ್ವಜನಿಕರ ಭೇಟಿಗೆ ಸಿಗಲಿದ್ದಾರೆ. ಬೆಳಗ್ಗೆ 10ಕ್ಕೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್‌ರ ಮನೆಗೆ ಮತ್ತು ಮಧ್ಯಾಹ್ನ 12ಕ್ಕೆ ದೇರಳಕಟ್ಟೆ ಮತ್ತು ಮಂಜನಾಡಿಯಲ್ಲಿ ಪ್ರಕೃತಿ ವಿಕೋಪದಿಂದ ದುರಂತಕ್ಕೀಡಾದ ಸ್ಥಳಕ್ಕೆ ಭೇಟಿ ನೀಡುವರು.  ಅಂದು ಸಂಜೆ 4.30ಕ್ಕೆ ಸರ್ಕ್ಯೂಟ್ ಹೌಸ್‌ನಲ್ಲಿ ಮತ್ತೆ ಸಾರ್ವಜನಿಕರ ಭೇಟಿಗೆ ಸಿಗಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.  

Exit mobile version