Site icon Ullalavani

ಮೊಂಟೆಪದವು ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಕೊಲೆ ಶಂಕೆ

ಉಳ್ಳಾಲ : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮೋಟೆಪದವು ಸಮೀಪ ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೇಯಾಗಿದ್ದು,. ಸೊಂಟಕ್ಕೆ ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ಶವ ಸಿಕ್ಕಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ.
ಸಕಲೇಶಪುರ ಮೂಲದ ಸುಂದರಿ (35) ಎಂಬವರ ಮೃತದೇಹ ಪತ್ತೆ ಯಾಗಿದೆ. ಕಳೆದ ಒಂದೂವರೇ ವರ್ಷಗಳಿಂದ ಮನೆ ಮನೆ ಕೆಲಸಕಕ್ಕೆ ತೆರಳಿ ಜೀವನ ನಿರ್ವಹಿಸುತ್ತಿದ್ದ ಈಕೆ ಮನೆ ಯಲ್ಲಿ ಒಂಟಿಯಾಗಿದ್ದರು. ಇದೀಗ ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾರದ ಹಿಂದೆ ಕೊಲೆ ನಡೆಸಿರುವ ಸಾಧ್ಯತೆ ಇದ್ದು,. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸೊಂಟಕ್ಕೆ ಕೆಂಪು ಕಲ್ಲನ್ನು ಕಟ್ಟಲಾಗಿದ್ದು ಕಿರುಕುಳ ನೀಡಿ ಕೊಲೆ ನಡೆಸಿರುವ ಸಾಧ್ಯತೆಗಳಿವೆ. ಕೊಣಾಜೆ ಪೋಲೀಸರು ಸ್ಥಳದಲ್ಲಿ ತನಿಖೆ ಆರಂಭಿಸಿದ್ದಾರೆ.

Exit mobile version