Site icon Ullalavani

ಮೇ 23-25ರ ವರೆಗೆ ಬೇಸಗೆ ಶಿಬಿರ

ಉಳ್ಳಾಲ : ರೀಚಲ್ ಚಾರಿಟೆಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಉಚಿತವಾಗಿ ಮೂರು ದಿನಗಳ ಬೇಸಗೆ ರಜಾ ಶಿಬಿರ ಮೇ 23ರಿಂದ ಮೇ 25ರವರೆಗೆ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಸಂತ ಸೆಬಾಸ್ಟಿಯನ್ ಬಳಿಯ ರೀಚಲ್ ಸಂಸ್ಥೆಯಲ್ಲಿ ನಡೆಯಲಿದೆ.
ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರಗೆ ನಡೆಯಲಿರುವ ಈ ಶಿಬಿರದಲ್ಲಿ ಮಕ್ಕಳಲ್ಲಿ ಶಿಸ್ತು, ಸಾಮಾನ್ಯ ಜ್ಞಾನ, ಜ್ಞಾಪಕ ಶಕ್ತಿ ಹೆಚ್ಚಿಸುವ ಚಟುವಟಿಕೆ ಸೇರಿದಂತೆ ವಿವಿಧ ಕೌಶಲ ವಿಕಸನ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಪರಿಣಿತರು ಮಾಹಿತಿ ಮತ್ತು ಚಟುವಟಿಕೆಯೊಂದಿಗೆ ನಡೆಸಿಕೊಡಲಿದ್ದಾರೆ ಎಂದು ಟ್ರಸ್ಟ್‌ನ ಅಧ್ಯಕ್ಷ ಸಿರಿಲ್ ಡಿ’ಸೋಜಾ ಭಟ್ನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version