Site icon Ullalavani

ಉಳ್ಳಾಲ: ರಾಣಿ ಅಬ್ಬಕ್ಕಳಿಗೆ ಹಾರ ಹಾಕಿ ೬೯ನೇ ಸ್ವಾತಂತ್ರ್ಯೋತ್ಸವ ಆಚರಣೆ

ಉಳ್ಳಾಲ್ ನ್ಯೂಸ್‌ಡೆಸ್ಕ್
ಉಳ್ಳಾಲ: ಭಯೋತ್ಪಾದನೆ, ಆಂತರಿಕ ಗಲಭೆ, ದೇಶ ವಿರೋಧಿ ಕೃತ್ಯಗಳಿಂದ ಜನ ದೂರ ಇರುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುವುದು, ಸ್ವಾತಂತ್ರ್ಯ ಹೋರಾಟಕ್ಕೆ ಸಲ್ಲುವ ನಿಜವಾದ ಗೌರವ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. Indipendence copy ಅವರು ಉಳ್ಳಾಲದ ಕರಾವಳಿ ಸಾಂಸ್ಕೃತಿಕ ಪರಿಷತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ೬೯ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ ಪ್ರತಿಮೆಗೆ ಹಾರವನ್ನು ಹಾಕಿ ವಿಶಿಷ್ಟವಾಗಿ ಆಚರಿಸಿದರು.
ಈ ಸಂದರ್ಭ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಬಿಜೆಪಿ ಹಿರಿಯ ಮುಖಂಡ ಸೀತಾರಾಮ ಬಂಗೇರ, ಸೌತ್ ಕೆನರಾ ಫೋಟೊಗ್ರಾಫರ್‍ಸ್ ಅಸೋಸಿಯೇಷನ್ನಿನ ಉಳ್ಳಾಲ ವಲಯ ಅಧ್ಯಕ್ಷ ಅರುಣ್ ಉಳ್ಳಾಲ್,ಚಂದ್ರಹಾಸ್ ಅಡ್ಯಂತಾಯ, ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಯಶವಂತ ಅಮೀನ್, ಬಾಬು ಬಂಗೇರ, ರಾಮ ಉಳ್ಳಾಲ್, ಪ್ರೇಮನಾಥ್ ಪುತ್ರನ್, ಹರಿಯಪ್ಪ ಸಾಲ್ಯಾನ್, ಅನಿಲ್ ದಾಸ್, ಗಣೇಶ್ ಕಾಪಿಕಾಡ್, ಜೀವನ್ ತೊಕ್ಕೊಟ್ಟು, ಪ್ರವೀಣ್.ಯಸ್.ಕುಂಪಲ, ಪ್ರವೀಣ್ .ಡಿ.ಕುಂಪಲ, ಅಶೋಕ್ ಕುಂಪಲ, ಶೇಖರ್ ಪೂಜಾರಿ, ಸುಧೀರ್ ಮೊಗವೀರಪಟ್ನ, ಇಬ್ರಾಹಿಂ ಉಳ್ಳಾಲ, ಗೋಪಿನಾಥ್ ಕಾಪಿಕಾಡು, ಪ್ರಶಾಂತ್ ಕಾಪಿಕಾಡು, ಜೀವನ್ ಕಾಪಿಕಾಡು ಮೊದಲಾದವವರು ಉಪಸ್ಥಿತರಿದ್ದರು.

Exit mobile version