
ಮಾಡೂರು: ಇಲ್ಲಿನ ಕೊಂಡಾಣ ರಸ್ತೆಯಲ್ಲಿರುವ ಸಾಯಿಧಾಮದ ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದಲ್ಲಿ ಮಾಡೂರು ಸಾಯಿಧಾಮ ದಶಮಾನೋತ್ಸವ ಅಂಗವಾಗಿ 108 ಕಾಯಿ ಗಣಯಾಗ, ಮಹಾಚಂಡಿಕಾಯಾಗ, ನವಗೃಹ ಮೃತ್ಯುಂಜಯ ಹೋಮ, ರಾಮನವಮಿ ಉತ್ಸವ ಹಾಗೂ ಶ್ರೀ ರಕ್ತೇಶ್ವರೀ ಹಾಗೂ ಗುಳಿಗ ದೈವದ ನೇಮ ಎ.2 ರಿಂದ ಎ.8 ರವರೆಗೆ ಜರಗಲಿದೆ.
ಕಂಕನಾಡಿ ಗರೋಡಿ ಕ್ಷೇತ್ರದ ವೇದಮೂರ್ತಿ ಗಂಗಾಧರ ಶಾಂತಿಯವರ ಪೌರೋಹಿತ್ಯದಲ್ಲಿ ಏಳು ದಿನಗಳ ಕಾಲ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ಎ.2 ರಂದು ಗಣಪಪತಿ ಹೋಮದಿಂದ ಆರಂಭಗೊಂಡು ಸೂರ್ಯೋಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡದಿಂದ ಭಜನಾ ಸಂಕೀರ್ತನೆ ಮಧ್ಯಾಹ್ನ ಮಹಾಪೂಜೆ, ಸಂಜೆ ಕುಣಿತ ಭಜನೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಾನ ಸಿಂಚನ ಭಕ್ತಿ ಸಂಗೀತ ರಸಮಂಜರಿ ಅಕ್ಷಯ ಕಾವಳ್ಕಟ್ಟೆ ಸಾರಥ್ಯದ ಸ್ವರಾಮೃತ ಮ್ಯೂಸಿಕಲ್ ತಂಡದಿಂದ ನಡೆಯಲಿದೆ.
ಎ. 3ರಂದು 108 ತೆಂಗಿನಕಾಯಿ ಗಣಯಾಗ , ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಕುಣಿತ ಭಜನೆ, ಶೇಜಾರತಿ, ಮಹಾಪೂಜೆ ನಡೆಯಲಿದೆ.
ಎ.4 ರಂದು ಮಹಾಚಂಡಿಕಾಯಾಗ
ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿ ದಿವ್ಯ ಉಪಪಸ್ಥಿತಿಯಲ್ಲಿ ಜರುಗಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಕಮಲಾದೇವಿ ಅಸ್ರಣ್ಣ ಉಪಸ್ಥಿತಿಯಲ್ಲಿ ಜರಗಲಿದೆ.
ರಾತ್ರಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲಲ್ಲಿ ಕೋಟೆಕಾರು ವ್ಯ.ಸೇ.ಸಹ.ಬ್ಯಾಂಕ್ ನಿರ್ದೇಶಕ ಉದಯ ಕುಮಾರ್ ಶೆಟ್ಟಿ ಕೊಂಡಾಣಗುತ್ತು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮೊದಲಾದವರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಶಿವಧೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ.
ಎ.5ರಂದು ನವಗ್ರಹ ಮೃತ್ಯುಂಜಯ ಹೋಮ ರಾತ್ರಿ 8ಕ್ಕೆ ಮಹಿಳಾ ಸಂಗಮ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಸಂಗಮ, ರಾತ್ರಿ 10ಕ್ಕೆ ನಾಟ್ಯನಿಕೇತನ ಕೊಲ್ಯ ಪ್ರಸ್ತುಪಡಿಸುವ ಏಳುವೆರ್ ದೆಯ್ಯರ್ ತುಳು ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಎ.6 ರಂದು ರಾಮನವಮಿ ಉತ್ಸವ ದಂದು ರಾಮತಾರಕ ಜಪಯಜ್ಞ, ಶ್ರೀ ಶಿರ್ಡಿ ಸಾಯಿಬಾಬಾ ಗುರುಗಳಿಗೆ ಪಂಚಾಮ್ರತ ಅಭಿಷೇಕ, ಸೀಯಾಳಾಭಿಷೇಕ, ಕುಣಿತ ಭಜನೆ, ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ. ರಾತ್ರಿ ಲಕುಮಿ ತಂಡದಿಂದ ಒರಿಯಾಂಡಲಾ ಸರಿ ಬೋಡು ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಎ.7 ರಂದು ಶ್ರೀ ನಾಗದೇವರಿಗೆ ಅಭಿಷೇಕ, ತಂಬಿಲ ಸೇವೆ, ಆಶ್ಲೇಷ ಬಲಿ, ನಾಗದರ್ಶನ ಸಂಜೆ 5.30ಕ್ಕೆ ಪೇಟೆ ಸವಾರಿ ಪಲ್ಲಕಿ ಉತ್ಸವ ಶ್ರೀ ಸಾಯಿಬಾಬಾ ಮಂದಿರದಿಂದ ಹೊರಟು ಶ್ರೀ ವನದುರ್ಗ ಅಯ್ಯಪ್ಪ ಮಂದಿತ ಮಾಡೂರು ನಂತರ ಮಡ್ಯಾರ್ ಶ್ರೀ ಶಾಸ್ತಾರ ಅಶ್ವಥ ಕಟ್ಟೆಯಲ್ಲಿ ಪೂಜೆಯಾಗಿ ಸಾಯಿ ಮಂದಿರ ತಲುಪಲಿದೆ.
ಎ.8 ರಂದು ಶ್ರೀ ರಕ್ತೇಶ್ವರಿ ಹಾಗೂ ಗುಳಿಗ ದೈವ ನೇಮೋತ್ಸವ ನಡೆಯಲಿದೆ.