Site icon Ullalavani

ಹಿಂದೂಯುವಸೇನೆ ಬಗಂಬಿಲ ಶ್ರೀ ಮಹಾದೇವಿ ಶಾಖೆಯಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ


ಉಳ್ಳಾಲ: ಬಗಂಬಿಲದ ಹಿಂದೂನಗರದ ಹಿಂದೂ ಯುವ ಸೇನೆಯ ಶ್ರೀ ಮಹಾದೇವಿ ಶಾಖೆಯ 15 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮಾ.29 ರಂದು ಬಗಂಬಿಲ ಮೈದಾನದಲ್ಲಿ ಜರಗಲಿದೆ.
ರಾತ್ರಿ 8.30ಕ್ಕೆ ಶ್ರೀ ಕ್ಷೇತ್ರ ಒಡಿಯೂರು, ಶ್ರೀ ಗುರುದೇವ ದತ್ತ ಸಂಸ್ಥಾಪನಂ ಇಲ್ಲಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸಂಜೆ 7.30ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಹಾಗೂ ಸ್ತಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ಊರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10.00 ಕ್ಕೆ ಬೆನಕ ಆರ್ಟ್ಸ್ ಕುಡ್ಲ ಕಲಾವಿದರಿಂದ ಪೊರಿಪುದಪ್ಪೆ ಜಲದುರ್ಗೆ ಸಿನಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version