Site icon Ullalavani

ನೆಲ್ಯಾಡಿಯಲ್ಲಿ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾಟ ಮಾ.29 ಸಂಜೆ 6 ಕ್ಕೆ ಬೀರಿ ಬಿಎಫ್‌ಸಿ ಮೈದಾನದಲ್ಲಿ ಉಳ್ಳಾಲ ತಾಲೂಕು ತಂಡದ ಆಯ್ಕೆ ಪ್ರಕ್ರಿಯೆ ಆಸಕ್ತ ಆಟಗಾರರು ತಕ್ಷಣವೇ ಸಂಪರ್ಕಿಸಿರಿ

ಉಳ್ಳಾಲ: ಏ.5 ರಂದು ನೆಲ್ಯಾಡಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಉಳ್ಳಾಲ ತಾಲೂಕು ತಂಡದ ಆಯ್ಕೆ ಪ್ರಕ್ರಿಯೆಯನ್ನು ಮಾ. 29 ರ ಶನಿವಾರ ಸಂಜೆ 6 ಗಂಟೆಗೆ ಕೋಟೆಕಾರ್ ಬಿ ಎಫ್ ಸಿ ಬೀರಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಉಳ್ಳಾಲ ತಾಲೂಕಿನ ವಾಲಿಬಾಲ್ ಆಟಗಾರರಾದ ಪುರುಷರು, ಮಹಿಳೆಯರು, ಕಾಲೇಜು ಬಾಲಕರು, ಬಾಲಕಿಯರು ಭಾಗವಹಿಸಬಹುದಾಗಿದೆ. ಆಸಕ್ತರು ಬರುವಾಗ ಆಧಾರ್ ಕಾರ್ಡ್ ಪ್ರತಿಯನ್ನು ತರತಕ್ಕದ್ದು ಎಂದು ಉಳ್ಳಾಲ ತಾಲೂಕು ವಾಲಿಬಾಲ್ ಅಶೋಸಿಯೇಷನ್ ಅಧ್ಯಕ್ಷರಾದ ತ್ಯಾಗಮ್ ಹರೇಕಳ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಆಯ್ಕೆ ಸುತ್ತಿಗೆ ಹೆಸರನ್ನು ನೋಂದಾಯಿಸಿಕೊಳ್ಳಲು ವಾಟ್ಸ್ ಅಪ್ ಸಂಖ್ಯೆ 9448529524

Exit mobile version