Site icon Ullalavani

ಓವರ್ ಬ್ರಿಡ್ಜ್ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ಅದ್ಧೂರಿಯಾಗಿ ಜರಗಿದ ಕೋಲ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಉಳ್ಳಾಲ: ತೊಕ್ಕೊಟ್ಟು ಓವರ್ ಬ್ರಿಡ್ಜ್ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಆಶ್ರಯದಲ್ಲಿ ಜರಗುವ ವರ್ಷಾವಧಿ ಕೋಲ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ಜರಗಿತು.
ಮೊದಲ ದಿನ ಜರಗಿದ ಸಾಂಸ್ಕೃತಿಕ ಮನೋರಂಜನಾ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಮುಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್ ಚಾಲನೆ ನೀಡಿದರು. ಬಳಿಕ ಮಾತನಾಡಿ ಓವರ್ ಬ್ರಿಡ್ಜ್ ಅಜ್ಜನ ಕ್ಷೇತ್ರದಲ್ಲಿ ಅಜ್ಜನ ಆಶೀರ್ವಾದಿಂದ ಪ್ರತಿವರ್ಷವೂ ಕೋಲ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಿಂದ ನಡೆಯುತ್ತಿದೆ. ಪರಿಸರಕ್ಕೆ ಸಮಿತಿ ಉತ್ತಮ ಕಾರ್ಯಗಳನ್ನು ನಡೆಸುತ್ತಾ ಬಂದಿದೆ ಎಂದರು.
ದಿ ಮೈಸೂರ್ ಇಲೆಕ್ಟ್ರಿಕಲ್ಸ್ ನಿಗಮದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಓವರ್ ಬ್ರಿಡ್ಜ್ ಅಜ್ಜನ ಕಾರಣಿಕವೇ ಬೇರೆ, ಅನ್ನಪ್ರಸಾದ ಸ್ವೀಕರಿಸಿದ ಭಕ್ತರ ಕಷ್ಟಕಾರ್ಪಣ್ಯಗಳು ಅವರ ಮುಖಭಾವದಿಂದ ಈಡೇರಿದೆ ಎಂಬುದನ್ನು ತೋರಿಸುತ್ತದೆ. ಅಜ್ಜನ ಕಾರಣಿಕವಲ್ಲದೆ ಬೇರಾವುದೇ ಇಲ್ಲದೆ ಕಾರ್ಯಕ್ರಮಗಳು ನಡೆಯಲು ಸಾಧ್ಯವಿಲ್ಲ ಎಂದರು.
ದೇಯಿ ಬೈದೆತಿ ಕೋಟಿ ಚೆನ್ನಯ್ಯ ಗೆಜ್ಜೆಗಿರಿ ಕ್ಷೇತ್ರದ ಚಂದ್ರಶೇಖರ್ ಉಚ್ಚಿಲ್ ಮಾತನಾಡಿ, ಹಲವರ ಸಮಸ್ಯೆ ನಿವಾರಣೆ ಮಾಡಿದಂತಹ ಕ್ಷೇತ್ರ. ರಾಜ್ಯದ ವಿವಿದೆಡೆ ನಂಬುವ ದೈವ ಕೊರಗಜ್ಜ ಆಗಿದ್ದಾರೆ. ಸರಳ ಸೇವೆಯನ್ನು ಪಡೆದುಕೊಂಡು ದೊಡ್ಡ ಅನುಗ್ರಹ ನೀಡುವ ಅಜ್ಜ ಎಂದರು.
ಉರ್ವ ಶಿರಡಿ ಸಾಯಿಬಾಬಾ ಮಂದಿರ ಮ್ಯಾನೇಜಿಂಗ್ ಟ್ರಸ್ಟೀ ವಿಶ್ವಾಸ್ ಕುಮಾರ್ ದಾಸ್ , ಉದ್ಯಮಿ ಅಸ್ತ್ರ ಗ್ರೂಪ್ ಮಾಲೀಕ ಲಾಂಚುಲಾಲ್ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸೋಮೇಶ್ವರ ಪುರಸಭೆ ಸದಸ್ಯ ಹಾಗೂ ದೇವಸ್ಥಾನದ ಟ್ರಸ್ಟೀ ದೀಪಕ್ ಪಿಲಾರ್, ಗಣೇಶ ಮಂದಿರದ ಅಧ್ಯಕ್ಷ ಚಿತ್ತರಂಜನ್ ಮಾಡ, ಕೆಎಸ್ ಆರ್ ಟಿಸಿ ನಿವೃತ್ತ ಅಧಿಕಾರಿ ಭಾಸ್ಕರ್ ತೊಕ್ಕೊಟ್ಟು, ತೊಕ್ಕೊಟ್ಟು ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲಾ ಅಧ್ಯಕ್ಷ ಪುರುಷೋತ್ತಮ್ ಗಟ್ಟಿ , ಅನ್ವಿತ್ ಇಲೆಕ್ಟಾçನಿಕ್ಸ್ ಮಾಲೀಕ ಪ್ರಕಾಶ್, ಮೂಡ ಸರ್ವೇಯರ್ ಪ್ರಸನ್ನ ಕುಮಾರ್, ಉಳ್ಳಾಲ ನಗರಸಭೆ ಸದಸ್ಯ ಭಾಝಿಲ್ ಡಿಸೋಜ
ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೊರಗಜ್ಜ ಕ್ಷೇತ್ರದ ಅರ್ಚಕರ ಹಿರಿಯ ಪದ್ಮನಾಭಣ್ಣ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ ಹಾಗೂ ಉಳ್ಳಾಲ ತೀಯ ಸೇವಾ ಸಮಾಜ ಸಂಘದ ಅಧ್ಯಕ್ಷ ಜಯಂತ್ ಕೊಂಡಾಣ ಇವರನ್ನು ಸನ್ಮಾನಿಸಲಾಯಿತು. ಸಮಿತಿಯ ಮುರಳೀಧರ್ ಸಾಲ್ಯಾನ್ ಕಾರ್ಯಕ್ರಮ ಸಂಯೋಜನೆ ನಡೆಸಿದರು.
ಸಮಿತಿ ಸಂಚಾಲಕ ರಾಜೇಶ್ ಕಾಪಿಕಾಡ್ ಇವರ ಸೇವಾರ್ಥವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ಸ್ವಾಮಿ ಕೊರಗಜ್ಜನ ವಾರ್ಷಿಕ ಕೋಲದಲ್ಲಿ ವಿನಯ್ ಕುಲಕರ್ಣಿ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು. ಪ್ರಕಾಶ್ ಕುಂಪಲ ಜತೆಯಾಗಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉರ್ವ ಚಿಲಿಂಬಿಯ ಸಾಯಿ ಶಕ್ತಿ ಕಲಾ ಬಳಗದಿಂದ ಜೋಡು ಜೀಟಿಗೆ ಸತ್ಯೊಧ ಸಾದಿಗ್ ಧರ್ಮೊದ ಬೊಲ್ಪು ತುಳು ಜನಪದ ನಾಟಕ ಪ್ರದರ್ಶನಗೊಂಡಿತು.

Exit mobile version