Site icon Ullalavani

ಡಾ. ವಾಮನ ನಂದಾವರ ನಿಧನಕ್ಕೆ ಸಂತಾಪ

ಉಳ್ಳಾಲ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ-ತುಳು ವಿದ್ವಾಂಸರಾದ ಡಾ. ವಾಮನ ನಂದಾವರ ನಿಧನಕ್ಕೆ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಸಂತಾಪ ವ್ಯಕ್ತಪಡಿಸಿದೆ.
ಡಾ.ವಾಮನ ನಂದಾವರ ಹಲವು ವರ್ಷಗಳಿಂದ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಸಲೆಹಾಗಾರರೂ ಆಗಿದ್ದರು. ಅಬ್ಬಕ್ಕ ಸಂಕಥನ ಪುಸ್ತಕದ ಸಂಪಾದಕರೂ ಆಗಿದ್ದ ಇವರ ನಿಧನದಿಂದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version