ಉಳ್ಳಾಲ : ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರ ಉಳಿಯ- ಉಳ್ಳಾಲ ಇದರ ವರ್ಷಾವಧಿ ಉತ್ಸವವು ಮಾ. 12ರ ಬುಧವಾರದಿಂದ ಮಾ.19ರ ಬುಧವಾರದವರೆಗೂ ಬಹಳ ವಿಜೃಂಭಣೆಯಿಂದ ಜರುಗಲಿರುವುದು.
ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಮಾ. 12ರಂದು ಗಣಪತಿ ಹೋಮ, ರಾತ್ರಿ 10.30 ಗಂಟೆಗೆ ಪಟ್ಟ ಸಿಂಹಾಸನದಿಂದ ಮೂಡಮಾಡಕ್ಕೆ ‘ಕಿರೋಳ್ ಉತ್ಸವ’ ರಾತ್ರಿ 2.00 ಗಂಟೆಗೆ ಶ್ರೀ ಧರ್ಮಅರಸರ ಉತ್ಸವ, ಮುಂಜಾನೆ 6.30ಗಂಟೆಗೆ ಶ್ರೀ ಉಳ್ಳಾಲ್ತಿ ಅಮ್ಮನವರ ಕಂಚಿನ ಪಟ್ಟದ ಮೊಗದಲ್ಲಿ ಉತ್ಸವ ನಡೆಯಲಿರುವುದು
ಮಾ13ರಂದು ರಾತ್ರಿ ಗಂಟೆ 9.00ಕ್ಕೆ ಮೂಡುಮಾಡದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಚಿನ್ನದ ಮೊಗದಲ್ಲಿ ಉತ್ಸವ ನಡೆಯಲಿದೆ.
ಮಾ 14ರಂದು ರಾತ್ರಿ ಗಂಟೆ 9.00ಕ್ಕೆ ಮೂಡಮಾಡದಲ್ಲಿ ಶ್ರಿ ಧರ್ಮಅರಸರ ವಲಸರಿ ಉತ್ಸವ ನಡೆಯಲಿದೆ. ಮಾ. 15 ರಂದು
ನಡು ಉತ್ಸವ, ರಾತ್ರಿ ಗಂಟೆ 8.00ಕ್ಕೆ ಶ್ರಿ ಧೂಮಾವತಿ, ಬಂಟ ದೈವದ ಕಟ್ಟುಕಟ್ಟಲೆ ನೇಮ ಸೇವೆ ನಡೆಯಲಿದೆ.
ರಾತ್ರಿ 9ರಿಂದ ಶ್ರೀ ರಕೇಶ್ವರೀ ಬಳಗ ಸೋಮೇಶ್ವರ ಇವರಿಂದ ಭಜನಾ ಸಂಕೀರ್ತನೆ. ರಾತ್ರಿ 9.30ರಿಂದ ಮೂಡುಮಾಡದಿಂದ ಪಡುಮಾಡಕ್ಕೆ ‘ಕಿರೋಳ್ ಉತ್ಸವ’ ರಾತ್ರಿ 2.00 ಗಂಟೆಗೆ ಶ್ರೀ ಧರ್ಮಅರಸರ ಕೆರೆದೀಪೋತ್ಸವ ನಡೆಯಲಿದೆ.
ಮುಂಜಾನೆ 6.30 ಗಂಟೆಗೆ ಶ್ರೀ ಉಳ್ಳಾಲ್ತಿ ಅಮ್ಮನವರ ಚಿನ್ನದ ಮೊಗದಲ್ಲಿ ಉತ್ಸವ ನಡೆಯಲಿದೆ.
ಮಾ.16 ರಂದು ರಾತ್ರಿ ಗಂಟೆ 9.00ಕ್ಕೆ ಪಡುಮಾಡದಲ್ಲಿ ಶ್ರೀ ಧರ್ಮಅರಸರ ದೊಡ್ಡ ವಲಸರಿ ಉತ್ಸವ ನಡೆಯಲಿದೆ.
ಮಾ.17 ರಂದು ರಾತ್ರಿ ಗಂಟೆ 7ರಿಂದ 9ರ ವರೆಗೆ ಶ್ರೀ ಶ್ರೀನಿವಾಸ ಮೂರ್ತಿ ಮತ್ತು ಬಳಗದವರಿಂದ ರಾತ್ರಿ ಗಂಟೆ 9.00ಕ್ಕೆ ಪಡುಮಾಡದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ವಲಸರಿ ಮತ್ತು ಚಿನ್ನದ ಮೊಗದಲ್ಲಿ ‘ಕೆರೆ ದೀಪೋತ್ಸವ’ ನಡೆಯಲಿದೆ. ಮಾ. 18 ರಂದು
ರಾತ್ರಿ ಗಂಟೆ 8.00ಕ್ಕೆ ಶ್ರೀ ಧೂಮಾವತಿ, ಬಂಟ ದೈವದ ಕಟ್ಟುಕಟ್ಟಲೆ ನೇಮ ಸೇವೆ, ರಾತ್ರಿ ಗಂಟೆ 9.30ಕ್ಕೆ ಪಡುಮಾಡದಿಂದ ಪಟ್ಟ ಸಿಂಹಾಸನಕ್ಕೆ ‘ಕಿರೋಜ್ ಉತ್ಸವ’ ನಂತರ ಬಟ್ಟಲು ಕಾಣಿಕೆ. ಶ್ರೀಗಂಧ-ಬೂಲ್ಯ ಪ್ರಸಾದ ವಿತರಣೆ ನಡೆಯಲಿದೆ.
ಮಾ. 19 ರಂದು ರಾತ್ರಿ ಗಂಟೆ 8.00ಕ್ಕೆ ಶ್ರೀ ಕ್ಷೇತ್ರದ ಉಳಿಯ ನಡುಬೆಟ್ಟು ಶ್ರೀ ಧೂಮಾವತಿ ಬಂಟ ದೈವದ ನೇಮ ನಡೆಯಲಿದೆ. ಮಾ .26ರಂದು ಕ್ಷೇತ್ರದ ಹೊರಾಂಗಣ ದೈವಗಳಿಗೆ ಕಟ್ಟುಕಟ್ಟಳೆ ಕೋಲ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.