Site icon Ullalavani

ಶ್ರೀ ವಿಷ್ಣುಮೂರ್ತಿ ಜನಾರ್ದನ ಭಜನಾ ಮಂಡಳಿ ಶ್ರೀ ಕ್ಷೇತ್ರ ಮಂಜನಾಡಿ ಇದರ 25ನೇ ವರ್ಷದ ಪುನರ್ ಪ್ರತಿಷ್ಠಾ ದಿನಾಚರಣೆ

ಉಳ್ಳಾಲ : ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನ, ಶ್ರೀ ವಿಷ್ಣುಮೂರ್ತಿ ಜನಾರ್ದನ ಭಜನಾ ಮಂಡಳಿ ಶ್ರೀ ಕ್ಷೇತ್ರ ಮಂಜನಾಡಿ ಇದರ 25ನೇ ವರ್ಷದ ಪುನರ್ ಪ್ರತಿಷ್ಠಾ ದಿನಾಚರಣೆ ಪ್ರಯುಕ್ತ ಶ್ರೀ ವಿಷ್ಣುಮೂರ್ತಿ ಜನಾರ್ದನ ಭಜನಾ ಮಂಡಳಿ ಇವರಿಂದ ಮಾ.10ರಂದು ಸೋಮವಾರ ಸೂರ್ಯೋದಯಕ್ಕೆ ಏಕಾಹ ಭಜನೆ ನಡೆಯಲಿದೆ‌. ಮಾ. 11ರ ಮಂಗಳವಾರದಂದು ಬೆಳಿಗ್ಗೆ 11.00ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದ್ದು
ಮಧ್ಯಾಹ್ನ 12.00 ಮಹಾಪೂಜೆಯ ನಂತರ ಅನ್ನಸಂತರ್ಪಣೆ ಅನ್ನದಾನ ನಡೆಯಲಿದೆ‌. ಸಂಜೆ 7.00ಕ್ಕೆ ರಂಗಪೂಜೆ ನಡೆಯಲಿದೆ. ಸಂಜೆ 6.00 ರಿಂದ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಗಾಯತ್ರಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದ್ದು . ರಾತ್ರಿ 8.00ಕ್ಕೆ ಅನ್ನಸಂತರ್ಪಣೆ ಜರಗಲಿರುವುದು. ಸಂಜೆ 5.45ಕ್ಕೆಸರಿಯಾಗಿ ಯಕ್ಷಗಾನ ಚೌಕಿ ಪೂಜೆಯು ನಡೆಯಲಿರುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Exit mobile version