Site icon Ullalavani

ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ನಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ

ಉಳ್ಳಾಲ ತಾಲೂಕು ಆಡಳಿತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ರಾಜ್ಯ ಕುಲಾಲ/ ಕುಂಬಾರರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಉಳ್ಳಾಲ ಸಮಿತಿ ಸಹಭಾಗಿತ್ವದಲ್ಲಿ ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ಇಲ್ಲಿ ಗುರುವಾರ ಸಂತ ಕವಿ ಸರ್ವಜ್ಞ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಶ್ರೀ ವೆಂಕಪ್ಪ ಮಾಸ್ತರ್ ಅಸೈಗೋಳಿ ದೀಪ ಬೆಳಗಿಸಿ ಸರ್ವಜ್ಞ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಜಯ ವಿಕ್ರಮ್ (ಉಪ ತಹಶೀಲ್ದಾರ್ ) ವಹಿಸಿದರು.
ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಭೌತಶಾಸ್ತ್ರ ಉಪನ್ಯಾಸಕರಾದ ಡಾ.ಲೋಕೇಶ್ ಕುಲಾಲ್ ನಾರ್ಶ ಸರ್ವಜ್ಞನ ಕುರಿತು ಉಪನ್ಯಾಸವಿತ್ತರು. ಆಕಾಶವಾಣಿ ಮಂಗಳೂರು ಕೇಂದ್ರದ ಉದ್ಘೋಷಕರಾದ ಶ್ರೀ ಪ್ರವೀಣ್ ಅಮ್ಮೆಂಬಳ ಸರ್ವಜ್ಞನ ವಚನಗಳನ್ನು ವಾಚಿಸಿದರು.‌ ಶ್ರೀ ಲಯನ್ ಅನಿಲ್ ದಾಸ್ ಅಂಬಿಕಾರೋಡ್, ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಶ್ರೀ ಭಾಸ್ಕರ ಕುತ್ತಾರ್,
ಪ್ರಾಥಮಿಕ‌ ಆರೋಗ್ಯ ಕೇಂದ್ರ ಕುರ್ನಾಡು ಮುಡಿಪು ಇಲ್ಲಿನ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಶಾಲಿನಿ ಎಂ.‌, ಶ್ರೀ ಮಂಜುನಾಥ ಮೂಲ್ಯ ಮಜಲ್, ಶ್ರೀ ಜಯಕುಲಾಲ್ ಪಾದಲ್ಪಾಡಿ, ಶ್ರೀ ಸುಂದರ್ ಕುಲಾಲ್ ಕೊಡಕ್ಕಲ್ಲು, ಶ್ರೀ ಬಾಲಕೃಷ್ಣ ಸಾಲಿಯಾನ್ ಕುತ್ತಾರ್ ಕಂಪ (ಮೂಲ್ಯಣ್ಣ), ಗೌರವ ಉಪಸ್ಥಿತರಿದ್ದರು.

Exit mobile version