ನಡಾರು ದೇವರ ಅರಮನೆ ರಸ್ತೆಯ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ 8ನೇ ವರ್ಷದ ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದ ವಾರ್ಷಿಕ ಸಾಮೂಹಿಕ ಅಗೆಲು ಸೇವೆ ಭಾನುವಾರ ಕ್ಷೇತ್ರದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಜರಗಿತು.
ಬೆಳಿಗ್ಗೆ ನಡೆದ ಭಜನಾ ಸಂಕೀರ್ತನಾ ಕಾರ್ಯಕ್ರಮಕ್ಕೆ ವಿಶಾಲ ಅಡ್ಕರಾಜ್ ಮುದ್ಯ ಮಡ್ಯಾರು, ಸುಲೋಚನಾ ಜಗದೀಶ್ ದಾಸ್ ಮಡ್ಯಾರ್, ಅಶ್ವಿನಿ ಹರಿದಾಸ್ ಮಾಡೂರು, ಶ್ವೇತಾ ಸಂತೋಷ್ ಕುಮಾರ್ ಹೊಟೇಲ್ ಉಮಾ ಪ್ಯಾಲೇಸ್ ಬೀರಿ, ಕಾರ್ತಿಕ್ ಕುಲಾಲ್ ಕಾವ್ಯ ನಡಾರು, ಮಲ್ಲಿಕಾ ಕೃಷ್ಣ ಪೂಜಾರಿ ಮಡ್ಯಾರು, ಮೇಘಾ ಅಜಿತ್ ನಡಾರು ಒಟ್ಟು ಏಳು ದಂಪತಿ ದೀಪ ಬೆಳಗಿಸಿ ಚಾಲನೆ ನೀಡಿದರು. ಮಧ್ಯಾಹ್ನ ಜರಗಿದ ಮಹಾಪೂಜೆ ಬಳಿಕ ಕ್ಷೇತ್ರದ ಕುರಿತಾದ ಪ್ರಧಾನ ಅರ್ಚಕ ವಿಶ್ವನಾಥ್ ಕುಲಾಲ್ ನಿರ್ದೇಶಿಸಿದ, ಸುರೇಶ್ ಕುಮಾರ್ ಮಂಗಲ್ಪಾಡಿ ಸಾಹಿತ್ಯದ, ಗಣೇಶ್ ಉಪ್ಪಳ ಹಾಡುಗಾರಿಕೆ, ಶಿವು ಕುಲಾಲ್ ಹಾಗೂ ಮೋಹಿತ್ ಕುಲಾಲ್ ಚಿತ್ರೀಕರಿಸಿದ, ಸೃಜನ್ ಮಂಜೇಶ್ವರ ಸಂಕಲನಗೈದ, ಸಂತೋಷ್ ಕುಮಾರ್ ಶೆಟ್ಟಿ ನಡಾರ್, ಚಿದಾನಂದ ಪೂಜಾರಿ ಮಡ್ಯಾರು ಇವರ ಸಹಕರಿಸಿದ `ನಡಾರು ಮಣ್ಣ ತುಡರ್’ ಭಕ್ತಿಗಾನದ ಆಡಿಯೋ ವೀಡಿಯೋವನ್ನು ಸರಪಾಡಿ ಶಿವಪ್ರಸಾದ್ ಶಾಂತಿ ಅನಾವರಣಗೊಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ಕಲಾಂಜಲಿ ಮೆಲೋಡೀಸ್ ಮಂಗಳೂರು ಇವರಿಂದ ಭಕ್ತಿರಸಮಂಜರಿ, ಭ್ರಾಮರಿ ಯಕ್ಷ ನಾಟ್ಯಾಲಯ ನಡಾರು, ಅಶ್ವಥ್ ಮಂಜನಾಡಿ ಇವರು ನಿರ್ದೇಶಿಸಿದ ಯಕ್ಷಗಾನ ಬಯಲಾಟ ಮಹಿಮೆದ ಬಾಲೆ ಸಿರಿಕಿಟ್ಟೆ ಪ್ರದರ್ಶನಗೊಂಡಿತು.
ಶ್ರೀಕಾಂತ್ ಕೊಂಡಾಣ ಮತ್ತು ಬಳಗದವರಿಂದ ಕಟೀಲ್ದಪ್ಪೆ ಉಳ್ಳಾಲ್ದಿ ನೃತ್ಯರೂಪಕದ ಪ್ರಥಮ ಪ್ರದರ್ಶನ , ಯಶಸ್ವಿ ಡ್ಯಾನ್ಸ್ ಗ್ರೂಪ್ ಕೊಂಡಾಣ ಇವರಿಂದ ವೈವಿಧ್ಯಮಯ ಜಾನಪದ ನೃತ್ಯ ನೆರವೇರಿತು.
ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಚಿದಾನಂದ ಪೂಜಾರಿ ಮಡ್ಯಾರ್ , ಕಾರ‍್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಹಾಗೂ ಪ್ರಧಾನ ಅರ್ಚಕ ವಿಶ್ವನಾಥ್ ಕುಲಾಲ್, ಸಹಅರ್ಚಕ ರಮೇಶ್ ಪೂಜಾರಿ ನಡಾರು, ಸುನಿಲ್ ಶೆಟ್ಟಿ ನಡಾರು, ರಾಮ ಗಟ್ಟಿ ನಡಾರು, ಅರುಣ್ ಕುಮಾರ್ ದೇವರಮನೆ, ಮಹಿಳಾ ಸಮಿತಿಯ ಅಧ್ಯಕ್ಷೆ ವಿಜಯ ಗಟ್ಟಿ, ಮೇಘಾ, ಕಸ್ತೂರಿ ಶೆಟ್ಟಿ, ಗುಲಾಬಿ ವಿ. ಕುಲಾಲ್, ಶ್ವೇತಾ ಶೆಟ್ಟಿ, ಪ್ರಸಾದ್ ಮಡ್ಯಾರ್, ಸದಾಶಿವ ಗಟ್ಟಿ, ರಾಜೇಶ್ ನಡಾರು ಉಪಸ್ಥಿತರಿದ್ದರು.
