ಮಾಡೂರು ಶ್ರೀ ಪಾಡಾಂಗರ ಭಗವತೀ ಕ್ಷೇತ್ರದಲ್ಲಿ ನವೀಕರಣಗೊಂಡ ಶ್ರೀ ಭಗವತೀ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಸೋಮವಾರದಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಕ್ಷೇತ್ರದಲ್ಲಿ ಸೋಮವಾರದಂದು ಬೆಳಿಗ್ಗೆ ಗಣಪತಿ ಹೋಮ ನಡೆದು ಬಳಿಕ ಮೀನ ಲಗ್ನದ ಶುಭಮೂಹರ್ತದಲ್ಲಿ ಶ್ರೀ ಭಗವತೀ ಹಾಗೂ ಪರಿವಾರ ದೈವ ಸಾನಿಧ್ಯಗಳ ಪುನಃ ಪ್ರತಿಷ್ಠೆ ಜೀವಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕದ ವಿಧಿ ವಿಧಾನಗಳು ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸುರೇಶ್ ಭಟ್ನಗರ, ಪ್ರಧಾನ ಕಾರ್ಯದರ್ಶಿ ಅಶೋಕ್ ಉಚ್ಚಿಲ್, ಕೋಶಾಧಿಕಾರಿ ಕಿಶೋರ್ ತುಂಬೆ ರಾಮಲ್ ಕಟ್ಟೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಉಮೇಶ್ಚಂದ್ರ ,ಕಾರ್ಯದರ್ಶಿ ಚೆನ್ನಪ್ಪ ಬಂಗೇರ, ಕೋಶಾಧಿಕಾರಿ ಭಾಸ್ಕರ.ಟಿ, ಮಾಡೂರು ಪಾಡಾಂಗರ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎನ್.ಜಯಪ್ರಕಾಶ್, ಮೊಕ್ತೇಸರರಾದ ಗಾಯತ್ರಿ ಸುಂದರ್, ನಯನ ಮಾಧವ ತಲಪಾಡಿ, ಗೌರವಾಧ್ಯಕ್ಷರುಗಳಾದ ಕುಮಾರ್ ಬಂಗೇರ, ಚಂದ್ರಶೇಖರ್ ಬಂಗೇರ ಮುಂಬಯಿ, ತಿಮ್ಮಪ್ಪ ಶೆಟ್ಟಿ ನೀಲಿಪಾಲು, ಸೂರಜ್ ಕೋಟೆಕಾರು,ಪ್ರ ಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಪವನ್ ರಾಜ್ ಕೊಲ್ಯ,ಸಾಂಸ್ಕೃತಿಕ ಸಮಿತಿಯ ಪ್ರಧಾನ ಸಂಚಾಲಕರಾದ ಸುಜಿತ್ ಮಾಡೂರು, ಭಾರತೀಯ ತೀಯಾ ಸಮಾಜದ ಉಳ್ಳಾಲ ವಲಯದ ಅಧ್ಯಕ್ಷರಾದ ಜಯಂತ್ ಕೊಂಡಾಣ, ಉದ್ಯಮಿ ಸಂತೋಷ್ ಬಂಗೇರ, ವಕೀಲರಾದ ದಿನೇಶ್ ಕೆ.ಬಿ, ಮಾಡೂರು ಶ್ರೀ ಪಾಡಾಂಗರ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕರು, ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಮೊದಲಾದವರು ಉಪಸ್ಥಿತರಿದ್ದರು.
