Site icon Ullalavani

ಪಟ್ಟೋರಿ: ಶ್ರೀ ನಾಗಬ್ರಹ್ಮ ಮಹಿಳಾ ಸಮಿತಿ ಅಧ್ಯಕ್ಷರಾಗಿ ನಿಶಾ ರವಿ ಕಾನ ಆಯ್ಕೆ

ಕೊಣಾಜೆ : ಶ್ರೀ ನಾಗಬ್ರಹ್ಮ ಮಹಿಳಾ ಸಮಿತಿ ಪಟ್ಟೋರಿ ಕೊಣಾಜೆ ಇದರ 2025-2026 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.
ನೂತನ ಅಧ್ಯಕ್ಷರಾಗಿ ನಿಶಾ ರವಿಕಾನ ಅವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ‌ ಶ್ವೇತಾ ಪ್ರವೀಣ್ ಪಟ್ಟೋರಿ , ಕಾರ್ಯದರ್ಶಿಗಳಾಗಿ ಪವಿತ್ರ, ನಯನಾ ಹೇಮಾ ಅವರು ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಬಬಿತಾ ದಿನೇಶ್ ಕಲಾಯಿ, ಗೌರವ ಸಲಹೆಗಾರರಾಗಿ ಬೇಬಿ ರೇಖಾ ಬಂಟು ಕೆ ನಡುಪದವು,‌ ಸರೋಜಿನಿ ಭಟ್ , ಉಪಾಧ್ಯಕ್ಷರುಗಳಾಗಿ ಮೀನಾಕ್ಷಿ ರಾಮಕೃಷ್ಣ ಪಟ್ಟೋರಿ, ಶಾರದಾ ಐತ್ತಪ್ಪ ಕುಲಾಲ್ ನಡುಪದವು, ಕೋಶಾಧಿಕಾರಿಯಾಗಿ ರಮ್ಯಾ ಗಣೇಶ್ ಪಟ್ಟೋರಿ , ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಲಾವಣ್ಯ, ಸಹನಾ, ಅಕ್ಷತಾ, ಜಯಂತಿ,‌ ಚಿತ್ರಾ ಹಾಗೂ ಭಜನಾ ಸಂಚಾಲಕರಾಗಿ ಪ್ರಮೀಳಾ ಪಟ್ಟೋರಿ,‌ ಮಲ್ಲಿಕಾ ಸಂತೋಷ್ ಅವರು ಆಯ್ಕೆಯಾಗಿದ್ದಾರೆ.

Exit mobile version