Site icon Ullalavani

ಆಪತ್ಬಾಂಧವ ಮಹಮ್ಮದ್ ಇಕ್ಬಾಲ್ !

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಹರೇಕಳ: ನೀರಲ್ಲಿ ಮುಳುಗುವುದೆಂದರೆ ನನ್ನಿಂದ ಸಹಿಸಲಾಗದು, ಹೇಗಾದರೂ ಅವರನ್ನು ಬದುಕಿಸಿಯೇ ಸಿದ್ಧ ಎಂದು ನಿರ್ಧರಿಸಿ ಹಾರಿಯೇ ಬಿಡುತ್ತೇನೆ… ಇದು ಕಳೆದ ಹಲವು ವರ್ಷಗಳಿಂದ ಹಲವು ಜೀವಗಳನ್ನು ರಕ್ಷಿಸಿರುವ ಆಪದ್ಭಾಂಧವ ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಹರೇಕಳದ ಮಹಮ್ಮದ್ ಇಕ್ಬಾಲ್ ಎಂಬವರ ಮನದಾಳದ ಮಾತು.

ಯಾವುದೇ ಫಲಾಪೇಕ್ಷೆಯಿಲ್ಲದೆ, ಜೀವದ ಆಸೆಯನ್ನು ಬಿಟ್ಟು ಹಾರುವ ದೃಢಕಾಯದ ಮಹಮ್ಮದ್ ಇಕ್ಬಾಲ್ ಇತ್ತೀಚೆಗೆ ನಡೆದ ಎರಡು ಘಟನೆಗಳಲ್ಲಿ ಸಾರ್ವಜನಿಕ ಶ್ಲಾಘನೆಗೆ ಒಳಗಾಗಿದ್ದಾರೆ. ಎರಡು ವಾರಗಳ ಹಿಂದೆ ಹರೇಕಳ ಕಡವಿನ ಬಳಿ ಹೊಯ್ಗೆ ಸಾಗಾಟ ನಡೆಸುತ್ತಿದ್ದ ದೋಣಿ ದುರಂತಕ್ಕೀಡಾದ ಸಂದರ್ಭ, ಇಬ್ಬರ ಜೀವಗಳನ್ನು ರಕ್ಷಿಸುವಲ್ಲಿ ಇಕ್ಬಾಲ್ ಓರ್ವನೇ ಪ್ರಮುಖ ಪಾತ್ರ ವಹಿಸಿದ್ದರು. ಭಾನುವಾರವೂ ಹರೇಕಳದಿಂದ ಹಲವು ಕಿ.ಮೀ ದೂರದ ಚೇಳೂರಿನ ಕೆಎಐಡಿಬಿ ಸೈಟಿಗೆ ಬರುವಷ್ಟರಲ್ಲಿ ಜಯಪ್ರಕಾಶ್ ಮತ್ತು ದೀಕ್ಷಿತ್ ಮುಳುಗಿಯಾಗಿತ್ತು.

ಘಟನೆ ನಡೆದು ಸುಮಾರು ಎರಡು ಗಂಟೆಗಳ ಕಾಲ ಕಲ್ಲು ಕ್ವಾರಿಗೆ ಇಳಿಯುವ ಸಾಹಸ ಯಾರು ನಡಸಿರಲಿಲ್ಲ. ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರೂ ಸಮಯಕ್ಕೆ ಸರಿಯಾಗಿ ತಲುಪುವಲ್ಲಿ ವಿಫಲರಾಗಿದ್ದರು. ಈ ಸಂದರ್ಭದಲ್ಲಿ ಪಾವೂರಿನಲ್ಲಿ ವಾರದ ಹಿಂದೆ ದೋಣಿ ಮುಳುಗಿದ ಘಟನೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲದ್ದ ಇಬ್ಬರನ್ನು ರಕ್ಷಿಸಿದ್ದ ಹರೇಕಳ ನ್ಯೂಪಡ್ಪು ನಿವಾಸಿ ಮಹಮ್ಮದ್ ಇಕ್ಬಾಲ್ ಅವರನ್ನು ಪಾವೂರಿನ ಸಮಾಜ ಸೇವಕ ಸತ್ಯಪಾಲ ರೈ ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದಿದ್ದು, ಕ್ಷಣಾರ್ಧದಲ್ಲಿ ಎರಡು ಮೃತದೇಹವನ್ನು ಮೇಲೆತ್ತಿದ್ದರು. ಆದರೆ ಅದಾಗಲೇ ಸಮಯ ಮೀರಿದ್ದರಿಂದ ಇಬ್ಬರನ್ನು ಜೀವಂತವಾಗಿ ಮೇಲೆತ್ತುವಲ್ಲಿ ವಿಫಲರಾದಕ್ಕೆ ವಿಷಾದ ವ್ಯಕ್ತಪಡಿಸಿದ ಇಕ್ಬಾಲ್ ಈ ಹಿಂದೆ ಸುಜೇರುವಲ್ಲಿ ಎಂಟು ವಿದ್ಯಾರ್ಥಿಗಳನ್ನು ರಕ್ಷಿಸಿದ್ದು, ಕಣ್ಣೂರಿನಲ್ಲಿ ಒರ್ವನನ್ನು ರಕ್ಷಿಸುವ ಮೂಲಕ ಅನೇಕ ಬಾರಿ ನೀರಿನಿಂದ ಹೋಗುವವರನ್ನು ಬದುಕಿಸುವಲ್ಲಿ ಯಶಸ್ವಿಯಾಗಿದ್ದು, ಹಲವು ಬಾರಿ ಅಪಧ್ಬಾಂದವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮತೀಯ ಸಂಘರ್ಷದಲ್ಲಿ ಪಾಲ್ಗೊಂಡು ಗಲಾಟೆ ನಡೆಸುವ ಯುವಕರಿಗೆ ಮಹಮ್ಮದ್ ಇಕ್ಬಾಲ್ ನಂತಹ ಆಪದ್ಭಾಂಧವ ಜೀವದ ಆಸೆ ಬಿಟ್ಟು ಧರ್ಮ ನೋಡದೆ ರಕ್ಷಿಸುವವರು ಪ್ರೇರಣೆಯಾಗಲಿ.

Exit mobile version