Site icon Ullalavani

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ೭೬ ನೇ ಗಣರಾಜ್ಯೋತ್ಸವ ಆಚರಣೆ

ಉಳ್ಳಾಲ : ವಿದ್ಯಾರ್ಥಿಗಳು ದೇಶದ ಸಂವಿಧಾನದ ಬಗ್ಗೆ ಗೌರವಭಾವ ಹೊಂದಿರಬೇಕಾದದ್ದು‌ ಅಗತ್ಯ. ಸೈನ್ಯಕ್ಕೆ ಸೇರುವ ಮೂಲಕ ದೇಶಸೇವೆಗೆ ತಯಾರಾಗುವ ಯುವ ಜನಾಂಗದ ಸಂಖ್ಯೆ ಹೆಚ್ಚಾಗಬೇಕಾಗಿದೆ. ಭಾರತದ ಭವಿಷ್ಯ ಇಂದಿನ ವಿದ್ಯಾರ್ಥಿಗಳ ಮೇಲೆ ಅವಲಂಬಿತವಾಗಿದೆ ಎಂದು ನಿವೃತ್ತ ಯೋಧ ರಾಘವೇಂದ್ರ ಭಟ್ ಜಿ ಹೇಳಿದ್ದಾರೆ.
ಅವರು ತೊಕ್ಕೊಟ್ಟುವಿನಲ್ಲಿರುವ ಮಂಗಳೂರು ಒನ್‌ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಇಲ್ಲಿ 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂಸ್ಥೆಯ ಪ್ರಧಾನಾಚಾರ್ಯರಾದ ವಿದ್ಯಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಂದ ಪಥ ಸಂಚಲನ, ಯೋಗ, ಕರಾಟೆ, ನೃತ್ಯ ನಡೆಯಿತು.


ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಪ್ರಖ್ಯಾತ್ ರೈ ಉಪಸ್ಥಿತರಿದ್ದರು. ಕೇಂದ್ರದ ಶಿಕ್ಷಕರಾದ ಲಾವಣ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ವಂಶಿತ್ ಸ್ವಾಗತಿಸಿದರು. ಗಗನ ವಂದಿಸಿದರು. ಆದ್ಯ ಚೌಟ ಕಾರ್ಯಕ್ರಮವನ್ನು ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವವನ್ನು ಸೌಮ್ಯ , ಶ್ರೀದೇವಿ, ಲಾವಣ್ಯ , ದೀಕ್ಷಾ, ಮಾಲಾಶ್ರೀ , ಪ್ರವೀಣ ದಯಾನಂದ್ , ರೇಷ್ಮಾ ನಿರ್ಮಾಲ್ ಭಟ್ , ಮಂಜಪ್ಪ ವಹಿಸಿದ್ದರು.

Exit mobile version