Site icon Ullalavani

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತ ತಿದ್ದಿದ ಬ್ರೋಕರ್‌ ಪ್ರಕರಣ, ಪ್ರಜಾಪ್ರಭುತ್ವ ಆಶಯಗಳನ್ನು ಉಳಿಸುವಿರಾ ಪ್ರಧಾನ ಕಾರ್ಯದರ್ಶಿಗಳು, ಉರ್ವ ಇನ್ಸ್‌ ಪೆಕ್ಟರ್‌, ಮುಡಾ ಕಮೀಷನರ್‌  

ಉಳ್ಳಾಲ : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರೋಕರ್‌ ಓರ್ವ ಕಡತ ತಿದ್ದಿದ ಪ್ರಕರಣ ತಿಂಗಳು ಕಳೆಯಲು  ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.  ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್‌ ಐ ಎಎಸ್‌ ,  ಮುಡಾ ಕಮೀಷನರ್‌ ನೂರ್‌ ಜೊಹಾರಾ ಖಾನುಮ್ ಮತ್ತು ಉರ್ವ  ಇನ್ಸ್‌ ಪೆಕ್ಟರ್‌ ಭಾರತಿ  ಪ್ರಜಾಪ್ರಭುತ್ವದ ವಿರುದ್ಧವಾಗಿರುವ ನಡೆಯ ವಿರುದ್ಧ ಕಾನೂನಿನಡಿ ಕ್ರಮಕೈಗೊಳ್ಳುವರೋ?  ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿ ಉಳ್ಳಾಲವಾಣಿ ಅಭಿಯಾನ ನಡೆಸುತ್ತಿದ್ದು  ಮೂವರು ಸಾರ್ವಜನಿಕ ಅಧಿಕಾರಿಗಳ ಮೊಬೈಲ್‌ ಸಂಖ್ಯೆಗೆ ತಪ್ಪಿತಸ್ಥರ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರು ಒತ್ತಾಯಿಸಬಹುದಾಗಿದೆ.

ಬ್ರೋಕರ್‌  ವಿರುದ್ಧ ಪೊಲೀಸ್‌ ಠಾಣೆಗೆ ಮುಡಾ ಸಿಬ್ಬಂದಿಯನ್ನು ಕಳುಹಿಸಲಾಯಿತಾದರೂ,  ಸಿಸಿಟಿವಿ ಇಡಲು  ದಾಖಲೆಗಳನ್ನು ಪೊಲೀಸ್‌ ಠಾಣೆಯಲ್ಲಿ ಕೇಳುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಕೊಡಲಿಯೇಟು  ಹಾಕಿದಂತಾಗಿದೆ.  ಪ್ರಕರಣವನ್ನು ಸರಕಾರದ ಕಾರ್ಯದರ್ಶಿಗಳು ಗಮನಹರಿಸುತ್ತಾರಾ ಅನ್ನುವ ಪ್ರಶ್ನೆಗೆ ಈವರೆಗೆ  ಪ್ರತಿಕ್ರಿಯೆಯೂ ಸಿಕ್ಕಿಲ್ಲ.  ಫಲಿತಾಂಶವೂ ಲಭ್ಯವಾಗಿಲ್ಲ. ಘಟನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿ ಪ್ರಜಾಪ್ರಭುತ್ವ ಉಳಿಸಿ ಸಮಿತಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ದೂರು ದಾಖಲಿಸುವ ನಿರ್ಧಾರವನ್ನು ಮಾಡಿದೆ.  ಬ್ರೋಕರ್‌ ನಡೆಸಿರುವ ಅಪರಾಧ ಚಟುವಟಿಕೆಯನ್ನು ಹಾಗೆಯೇ ಬಿಟ್ಟು, ಮುಡಾದೊಳಗೆ ನಿಯಮಗಳನ್ನು ಜಾರಿಗೊಳಿಸಿ ಸಾರ್ವಜನಿಕ ಕೆಲಸಗಳನ್ನು ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಅನ್ನುವ ಅಭಿಪ್ರಾಯವೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.  ತಿಂಗಳು ಮುಗಿಯುವುದರೊಳಗೆ  ಠಾಣಾಧಿಕಾರಿಗಳಾಗಲಿ, ಮುಡಾ ಕಮೀಷನರ್‌ ಆಗಲಿ ಪ್ರಕರಣ ದಾಖಲಿಸಿ  ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಿದಲ್ಲಿ ಜನತೆ  ಮುಡಾದೊಳಗಿರುವ ಪಾರದರ್ಶಕ ನಡೆಯ ಮೇಲೆ ನಂಬಿಕೆಯನ್ನು ಇಡಬಹುದು. 

ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ :9731132515
ಮುಡಾ ಕಮೀಷನರ್‌ -9686387777
ಉರ್ವ ಇನ್ಸ್‌ ಪೆಕ್ಟರ್‌ ಭಾರತೀ -9449044377

Exit mobile version