
ಉಳ್ಳಾಲ: ಮನೆಯಲ್ಲೇ ನೇಣುಬಿಗಿದು ದೇರಳಕಟ್ಟೆ ಟಯರ್ ಅಂಗಡಿ ಸಿಬ್ಬಂದಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಕಲ್ಕಟ್ಟ ಸಮೀಪದ ಬಟ್ಯಾಡಿ ಎಂಬಲ್ಲಿ ಸಂಭವಿಸಿದೆ.
ಕಲ್ಕಟ್ಟ ನಿವಾಸಿ ಪ್ರಕಾಶ್ ಅಂದ್ರಾದೆ (45) ಸಾವನ್ನಪ್ಪಿದವರು. ಹಲವು ವರ್ಷಗಳಿಂದ ದೇರಳಕಟ್ಟೆ ಟಯರ್ ಅಂಗಡಿಯಲ್ಲಿ ಕೆಲಸಕ್ಕಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವ ಸಂದರ್ಭ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಂತಿಮ ಸಂಸ್ಕಾರ ನಾಳೆ ಪಾನೀರು ಚರ್ಚಿನಲ್ಲಿ ಜರಗಲಿದೆ.