Site icon Ullalavani

ಕೊಣಾಜೆ ಮಂಗಳೂರು ವಿ. ವಿ ವಿದ್ಯಾರ್ಥಿ ಸಂಘದ ಚುನಾವಣೆ ಎಬಿವಿಪಿಗೆ ಜಯ, 11 ನೇ ಬಾರಿ ಆಯ್ಕೆ

ಮುಡಿಪು: 2024-25 ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲಲಿತ ಅಭ್ಯರ್ಥಿಗಳು ಆರಕ್ಕೆ 6 ಸ್ಥಾನದಲ್ಲಿ ಗೆಲ್ಲುವ ಮೂಲಕ ಸತತ 11ನೇ ಬಾರಿಗೆ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಮದನ್, ಉಪಾಧ್ಯಕ್ಷರಾಗಿ ಪಾವನ, ಕಾರ್ಯದರ್ಶಿಯಾಗಿ ಕಾರ್ತಿಕ್, ಸಹಕಾರ್ಯದರ್ಶಿಯಾಗಿ ಮಹೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಮ್ ಪ್ರಸಾದ್ ಹಾಗೂ ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೀರಾಜ್ ಚುನಾಯಿತರಾಗಿದ್ದಾರೆ.

Exit mobile version