
ಉಳ್ಳಾಲ: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ ಕೋಟೆಕಾರ್ ಇಲ್ಲಿನ ಆಡಳಿತ ಸಮಿತಿಗೆ ಜ .5 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ನಿಲ್ಲಿಸಲಾಗಿದೆ, ಸಂಘದ ಸಂಘವನ್ನು ಯಶಸ್ವಿಯಾಗಿ ಮತ್ತು ಜನಸ್ನೇಹಿ ಯಾಗಿ ಮುನ್ನಡೆಸಲು ಸದಸ್ಯರೆಲ್ಲರ ಬೆಂಬಲವನ್ನು ಯಾಚಿಸುತ್ತಿದ್ದೇವೆ ಎಂದು ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಹೇಳಿದ್ದಾರೆ.
ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಆದ್ಯತೆಯ ಮತ್ತು ಬದ್ಧತೆಯ ಕಾರ್ಯ ಯೋಜನೆಗಳನ್ನು ಸಂಘದ ಸದಸ್ಯರ ಮುಂದಿಟ್ಟು ಚುನಾವಣೆಯಲ್ಲಿ ಹೆಜ್ಜೆ ಇಡಲಾಗುತ್ತಿದೆ. ಸರ್ಕಾರವು ಘೋಷಣೆ ಮಾಡಿರುವಂತೆ ಶೂನ್ಯ ಬಡ್ಡಿದರದಲ್ಲಿ ಗರಿಷ್ಠ 5 ಲಕ್ಷ ದವರೆಗೆ ಬೆಳೆ ಸಾಲ. ಸರ್ಕಾರವು ಘೋಷಣೆ ಮಾಡಿರುವಂತೆ 3% ಬಡ್ಡಿದರದಲ್ಲಿ ಗರಿಷ್ಠ 10 ಲಕ್ಷ ದವರೆಗೆ ಮಧ್ಯಮ ಅವಧಿ ಕೃಷಿ ಅಭಿವೃದ್ಧಿಗೆ ಸಾಲ. ಸಂಘದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಗ್ರಾಮಗಳಲ್ಲಿ ಶಾಖೆಗಳನ್ನು ಸ್ಥಾಪಿಸಿ ಸದಸ್ಯರಿಗೆ ಅಗತ್ಯವಿರುವ ಸೇವೆಗಳನ್ನು ನೀಡಲು ಪ್ರಯತ್ನ. ಪ್ರತಿ ಗ್ರಾಮಗಳ ಶಾಖೆಗಳಲ್ಲಿ ರಸಗೊಬ್ಬರ, ಕ್ರಿಮಿನಾಶಕ, ಕೀಟನಾಶಕ, ದಿನಸಿ ವಸ್ತುಗಳು ಸದಸ್ಯರು ಗಳ ಅಗತ್ಯ ವಸ್ತುಗಳ ಮಾರಾಟಕ್ಕೆ ಆದ್ಯತೆಯ ಕಾರ್ಯ, ಸದಸ್ಯರುಗಳಿಗೆ ಅನುಕೂಲ ವಾಗುವಂತೆ ಎಲ್ಲಾ ಶಾಖೆಗಳಲ್ಲಿ ಸುಲಭ ಬಡ್ಡಿದರದಲ್ಲಿ ಚಿನ್ನಾಭರಣ ನಾಲ, ಆಪ್ತ ಸಾಲ, ವೇತನಾಧರಿತ ನಾಲ, ವ್ಯಾಪಾರ ಉದ್ದೇಶಿತ ಸಾಲ, ವಾಹನ ಸಾಲ ಹಾಗೂ ಇನ್ನಿತರ ಸಾಲಗಳನ್ನು ಸ್ಪರ್ಧಾತ್ಮಕ ಬಡ್ಡಿದರದಲ್ಲಿ ನೀಡುವುದು. ಒಟ್ಟಾಗಿ ನವರತ್ನ ಯೋಜನೆ ಮೂಲಕ 13 ಗ್ರಾಮ ವ್ಯಾಪ್ತಿಯಲ್ಲಿ ಇರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿ ಕರ್ನಾಟಕ ರಾಜ್ಯದಲ್ಲಿ ಮಾದರಿ ಸಹಕಾರಿ ಸಂಘವನ್ನಾಗಿಸಲು ಪ್ರಾಮಾಣಿಕತೆಯಿಂದ ಕಾರ್ಯ ನಡೆಸಲು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಸಿಬೇಕಿದೆ ಎಂದರು.
ಇತ್ತೀಚೆಗೆ ನಡೆದ ಮಂಚಿ ಮತ್ತು ಕೈರಂಗಳದ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳು ಎಲ್ಲಾ ಸ್ಥಾನವನ್ನು ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿಯೂ ಗೆಲ್ಲುವ ಮೂಲಕ ಗೆಲುವಿನ ಸರಮಾಲೆಯನ್ನು ಮುಂದುವರಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು
ಸಾಲಗಾರ ಕ್ಷೇತ್ರ-ಸಾಮಾನ್ಯ ಕ್ಷೇತ್ರದಲ್ಲಿ ಐವರು ಅಭ್ಯರ್ಥಿಗಳಿದ್ದು ಅಬ್ದುಲ್ ಕರೀಂ ಯು ಎನ್ ,ಉದಯ ಕುಮಾರ್ ಶೆಟ್ಟಿ, ದಿವ್ಯಾ ಎಸ್ ಶೆಟ್ಟಿ , ಪದ್ಮನಾಭ ಗಟ್ಟಿ , ಶಂಕರ ನಾರಾಯಣ ಆಚಾರ್ಯ ,
ಸಾಲಗಾರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಲ್ಲಿ ಪ್ರಶಾಂತ್ ಎ, ಸಾಲಗಾರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಲ್ಲಿ ದೇವದಾಸ್ ಎನ್ ಶೆಟ್ಟಿ , ಸಾಲಗಾರ ಕ್ಷೇತ್ರ ಅನುಸೂಚಿತ ಜಾತಿ ಮೀಸಲು ಸ್ಥಾನದಲ್ಲಿ ಸೀತಾರಾಮ ಕೆ , ಸಾಲಗಾರ ಕ್ಷೇತ್ರ ಅನುಸೂಚಿತ ಪಂಗಡ ಮೀಸಲು ಸ್ಥಾನದಲ್ಲಿ ಶಿವಪ್ಪ ನಾಯ್ಕ ಕೆ ,ಸಾಲಗಾರ ಕ್ಷೇತ್ರ ಮಹಿಳಾ ಮೀಸಲು ಸ್ಥಾನದಲ್ಲಿ ಕಮಲಾ ಗೌಡ, ರಮಣಿ , ಸಾಲಗಾರರಲ್ಲದ ಕ್ಷೇತ್ರದಲ್ಲಿ
ಬಾಬು ಶೆಟ್ಟಿ ಸ್ಪರ್ಧಿಸಲಿದ್ದಾರೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ವಕ್ತಾರ ಮೋಹನ್ ರಾಜ್ ಕೆ.ಆರ್, ಪ್ರಧಾನ ಕಾರ್ಯದರ್ಶೀಗಳಾದ ದಯಾನಂದ ತೊಕ್ಕೊಟ್ಟು, ಸುಜಿತ್ ಮಾಡೂರು, ಫಲಾನುಭಾವಿಗಳ ಜಿಲ್ಲಾ ಪ್ರಕೋಷ್ಠ ಸಹಸಂಚಾಲಕ ಜಿತೇಂದ್ರ ಶೆಟ್ಟಿ ತಲಪಾಡಿ, ಒಬಿಸಿ ಮೋರ್ಛಾ ಜಿಲ್ಲಾ ಕಾರ್ಯದರ್ಶಿ ರವಿ ಸೋವೂರು ಉಪಸ್ಥಿತರಿದ್ದರು.
ʻಮಂಚಿ-ಕೈರಂಗಳದಂತೆ ಕೋಟೆಕಾರು ಈ ಬಾರಿ ಬಿಜೆಪಿ ತೆಕ್ಕೆಗೆ ʼ: ಜಿಲ್ಲಾ ವಕ್ತಾರ ಮೋಹನ್ ರಾಜ್ ಕೆ.ಆರ್
ಹಲವು ವರ್ಷಗಳಿಂದ ಒಂದು ತಂಡ ಸರ್ವಾಧಿಕಾರ ಧೋರಣೆ ನಡೆಸುತ್ತಾ ಬಂದಿದೆ. ಬಿಜೆಪಿ ಸಮಗ್ರವಾಗಿ ಸ್ಪರ್ಧಿಸಬೇಕು ಅನ್ನುವ ಉದ್ದೇಶದಿಂದ ಅಭ್ಯರ್ಥಿಗಳನ್ನು ಹಾಕಲಾಗಿದೆ. ಮಂಚಿ-ಕೈರಂಗಳದಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಈ ಹಿಂದೆ ೯೦೦೦ ಮತದಾರರಿದ್ದರು. ಈ ಬಾರಿ ೧೭೮೪ ಮತದಾರರು ಪಟ್ಟಿಯಲ್ಲಿದ್ದು ಇಳಿಕೆಯನ್ನು ಕಂಡಿದೆ. ಇದಕ್ಕೆ ಸರ್ವಾಧಿಕಾರಿ ಧೋರಣೆವುಳ್ಳವರು ತಮ್ಮೊಂದಿಗೆ ನಿಕಟವಾಗಿರುವವರಿಗೆ ಮಾತ್ರ ಸದಸ್ಯತ್ವವವನ್ನು ನೀಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಪರಿಶೀಲನೆ ನಡೆಸುವಾಗ ಮೃತಪಟ್ಟ ಸದಸ್ಯರಿಗೆ ಮತದಾನದ ಹಕ್ಕಿದೆ, ಯುವಕರ ಹೆಸರುಗಳು ಮತದಾರಪಟ್ಟಿಯಿಂದ ಡಿಲೀಟ್ ಆಗಿದೆ. ಗುರುತಿನ ಚೀಟಿ ಹಂಚುವ ಕೆಲಸಗಳಲ್ಲಿಯೂ ಷಡ್ಯಂತ್ರ ನಡೆಸಲಾಗುತ್ತಿದೆ. ಬೇಕಾದವರಿಗೆ ಮಾತ್ರ ಗುರುತಿನ ಚೀಟಿಯನ್ನು ಹಂಚಲಾಗುತ್ತಿದೆ. ಬ್ಯಾಂಕಿನ ಸಮಗ್ರ ಮಾಹಿತಿಯನ್ನು ತಿಳಿಯಲು ಬಿಜೆಪಿ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ಪ್ರತಿಯೊಬ್ಬ ರೈತರ ಸವಲತ್ತುಗಳನ್ನು ಮನೆಗೆ ಮುಟ್ಟಿಸಲು ಪ್ರಯತ್ನ ನಡೆಸುತ್ತೇವೆ.