
ತೊಕ್ಕೊಟ್ಟು: ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಸಹಕಾರದಲ್ಲಿ, ಜೀವನ್ ಎಂ. ಶೆಟ್ಟಿ, ನರೇಶ್ ಚೌಟ ಮುಳಿಹಿತ್ಲು ನಿರ್ಮಾಣದಲ್ಲಿ ಕು.ಪೂಜಾ ಸನಿಲ್ ರವರ ಕಂಠ ಸಿರಿಯಲ್ಲಿ ಹಾಡಲಾದ ಬುರ್ದುಗೋಳಿ ಕೊರಗಜ್ಜನ ಕುರಿತಾದ ಭಕ್ತಿ ಸುಗಿಪು ಮಾಯೊದ ತುಡರ್ ಧ್ವನಿ ಸುರುಳಿ ಕಲ್ಲಾಪು ಬುರ್ದುಗೋಳಿ ಶ್ರೀ ಗುಳಿಗ ಕೊರಗಜ್ಜ ಉದ್ಬವ ಶಿಲೆಯ ಪ್ರಧಾನ ಸ್ಥಳದಲ್ಲಿ ದೈವ ಸೇವಕ ಮಾಯಿಲ ಕುತ್ತಾರ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷ ವಿಶ್ವನಾಥ ನಾಯಕ್, ಟೈಗರ್ ಕ್ಯಾಂಪ್ ನ ರಾಜ, ಧ್ವನಿ ಸುರುಳಿಯ ನಿರ್ಮಾಪಕರಾದ ಜೀವನ್ ಎಂ ಶೆಟ್ಟಿ, ನರೇಶ್ ಚೌಟ ಮುಳಿಹಿತ್ಲು, ಸಾಯಿ ಪರಿವಾರ್ ನ ಪುರುಷೋತ್ತಮ ಕಲ್ಲಾಪು, ರಜನೀಶ್ ನಾಯಕ್, ಬುರ್ದುಗೋಳಿ ಕ್ಷೇತ್ರದ ಪ್ರಶಾಂತ್ ಕಾಯಂಗಳ ಮುಂತಾದವರಿದ್ದರು. ಪ್ರವೀಣ್ ಎಸ್ ಕುಂಪಲ ನಿರೂಪಿಸಿದರು.
ಗಾಯಕಿ ಪೂಜಾ ಸನಿಲ್ ವಂದಿಸಿದರು.