
ಕುತ್ತಾರು: ವಿಧಾನಪರಿಷತ್ ಸದಸ್ಯ ಬಿಜೆಪಿ ಮುಖಂಡ ಎನ್. ರವಿಕುಮಾರ್ ಅವರು ಕುತ್ತಾರು ದೆಕ್ಕಾಡಿನಲ್ಲಿರುವ ಪ್ರಸಿದ್ಧ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಕೊರಗಜ್ಜನ ಆಶೀರ್ವಾದ ಪಡೆದರು.
ಭೇಟಿ ವೇಳೆ ಸ್ಥಳೀಯ ಭಕ್ತರು ಮತ್ತು ಕ್ಷೇತ್ರದ ಆಡಳಿತಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಇತಿಹಾಸ ಹಾಗೂ ಮಹತ್ವದ ಕುರಿತು ಮಾಹಿತಿಯನ್ನು ತಿಳಿದುಕೊಂಡರು. ಕ್ಷೇತ್ರದ ಪಾವಿತ್ರ‍್ಯತೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ದೈವಸ್ಥಾನ ಆಡಳಿತ ಮಾಡುತ್ತಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ಕೋರಗಜ್ಜ ಕ್ಷೇತ್ರವು ಇಡೀ ಪ್ರಾಂತ್ಯದ ಭಕ್ತರ ಮನದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಆಧ್ಯಾತ್ಮಿಕ ಚೈತನ್ಯದ ಕೇಂದ್ರವಾಗಿರುವ ಈ ಕ್ಷೇತ್ರವು ದಕ್ಷಿಣ ಕನ್ನಡದ ಪ್ರಮುಖ ಆರಾಧನಾ ಕೇಂದ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಲವು ಸ್ಥಳೀಯ ನಾಯಕರು, ಪಕ್ಷದ ಸದಸ್ಯರು ಮತ್ತು ಬೆಂಬಲಿಗರು ರವಿಕುಮಾರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಭೇಟಿ, ಸ್ಥಳೀಯ ಸಮುದಾಯದೊಂದಿಗೆ ಸಂಬಂಧವನ್ನು ಬೆಸೆಯುವ ಮತ್ತು ಸಂಸ್ಕೃತಿಯ ವೈವಿಧ್ಯತೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಮಹತ್ವವನ್ನು ಹೊಂದಿತ್ತು ಎಂದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಯತೀಶ್ ಹಾರ್ವರ್, ಜಿಲ್ಲಾ ಒಬಿಸಿ ಮೋರ್ಛಾ ಅಧ್ಯಕ್ಷ ಮಹೇಶ್ ಜೋಗಿ, ಉಪಾಧ್ಯಕ್ಷ ರಾಘವೇಂದ್ರ ರಾವ್, ಕ್ಷೇತ್ರ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಉಪಾಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ, ಪ್ರ.ಕಾ. ದಯಾನಂದ ತೊಕ್ಕೊಟ್ಟು, ರಾಜ್ಯ ಅಲ್ಪಸಂಖ್ಯಾತ ರ‍್ಯಕಾರಿಣಿ ಸಮಿತಿ ಸದಸ್ಯರು ಸಿರಾಜ್ ಮುಡಿಪು, ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಸತೀಶ್ ಪೂಜಾರಿ, ಜಿಲ್ಲಾ ಒಬಿಸಿ ರ‍್ಯದರ್ಶಿ ಸಂಪತ್ ಕುಕ್ಯಾನ್, ಶಕ್ತಿಕೇಂದ್ರದ ಅಧ್ಯಕ್ಷ ರಂಜಿತ್ ಮಂಜನಾಡಿ ಹಾಗೂ ಕೊರಗಜ್ಜ ಆದಿಸ್ಥಳದ ಟ್ರಸ್ಟೀಗಳು ಉಪಸ್ಥಿತರಿದ್ದರು.