Site icon Ullalavani

ಭಗವಂತ ಕೊಟ್ಟ ದೇಹವನ್ನು ಸಾಧನಾಶರೀರವಾಗಿ ಪರಿವರ್ತಿಸಿ: ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು

ಎಕ್ಕೂರು: ಭಗವಂತ ಕೊಟ್ಟ ದೇಹವನ್ನು ಸಾಧನಾ ಶರೀರವಾಗಿ ಪರಿವರ್ತಿಸಿ ಸಾಧನೆ ಮೂಲಕ ಭಗವಂತನಿಗೆ ವಾಪಸ್ಸು ಕೊಡುಗೆಯನ್ನು ನೀಡುವವರಂತಾಗಬೇಕು. ಅದಕ್ಕಾಗಿ ಆರೋಗ್ಯಯುತ ದೇಹವನ್ನು ಕಾಪಾಡುತ್ತಾ ನಿತ್ಯ ಭಗವಂತನ ಸ್ಮರಣೆಯನ್ನು ಮಾಡಲು ಎಲ್ಲಾ ರೀತಿಯ ಆಲಸ್ಯಗಳನ್ನು ದೂರವಾಗಿಸಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಹೇಳಿದರು.
ಎಕ್ಕೂರು ಸದಾಶಿವನಗರದಲ್ಲಿರುವ ಶ್ರೀ ಅನಂತನಾಗ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.೯ ರಿಂದ ೧೫ರವರೆಗೆ ಜರಗಿದ ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಮದ್ಭಾಗವತ ಪ್ರವಚನ ಸಪ್ತಾಹವನ್ನು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಇವರು ನೆರವೇರಿಸಿ, ನಿರ್ಮಲವಾದ ಹೃದಯಗಳನ್ನು ಯಾವುದೋ ಭಾವನೆಗಳನ್ನು ಇಟ್ಟುಕೊಂಡು ಕಲುಷಿತಗೊಳಿಸುತ್ತಿದ್ದೇವೆ. ಆದರೆ ಕೃಷ್ಣ ಪರಮಾತ್ಮನ ಸಂದೇಶಗಳನ್ನು ಅಂತರAಗದಲ್ಲಿರಿಸಿದಾಗ ನಿರ್ಮಲವಾಗಿಸಲು ಸಾಧ್ಯ. ಸಂಸಾರದಲ್ಲಿ ಬದುಕುವಂತಹ ಚಾಚಕ್ಯತೆಯನ್ನು ಕೃಷ್ಣ ಪರಮಾತ್ಮನಿಂದ ಕಲಿಯಬೇಕಿದೆ ಎಂದರು.
ಈ ಸಂದರ್ಭ ವೇ.ಬ್ರ. ಎಂ ಗೋಪಾಲಕೃಷ್ಣ ತಂತ್ರಿವರ್ಯರು, ಪತಂಜಲಿ ಯೋಗ ಶಿಕ್ಷಣ ಸಮಿತಿ ಎಕ್ಕೂರು ಇಲ್ಲಿನ ರಾಮದಾಸ್, ಅನಂತ ಕೃಷ್ಣ ರಾವ್ ಎಕ್ಕೂರು ಸೇರಿದಂತೆ ಶಿವಳ್ಳಿ ಸ್ಪಂಧನ ಎಕ್ಕೂರು ಇಲ್ಲಿನ ಸಮಿತಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Exit mobile version