Site icon Ullalavani

ಡಿ.21 ರಂದು ಅಲೇಕಳ ಮದನಿ ವಿದ್ಯಾಸಂಸ್ಥೆಯ ಸುವರ್ಣ ಸಂಭ್ರಮಾಚರಣೆ ನೂತನ ಕಟ್ಟಡದ ಶಂಕುಸ್ಥಾಪನೆ


ಉಳ್ಳಾಲ: ಅಳೇಕಲದ ಮದನಿ ಎಜ್ಯುಕೇಷನ್ ಅಸೋಸಿಯೇಷನ್‌ 50ನೇ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಆ ಪ್ರಯುಕ್ತ ಮದನಿ ಅಲ್ಯುಮ್ನಿ ಎಸೋಸಿಯೇಶನ್‌ ಇದರ ಸಹಭಾಗಿತ್ವದಲ್ಲಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಆಚರಣೆ 2024-25 ಪ್ರಯುಕ್ತ ಡಿ.21 ರಂದು 3 ಗಂಟೆಗೆ ಶಂಕುಸ್ಥಾಪನೆ ಹಾಗೂ ನೂತನ ಕಟ್ಟಡದ ನಾಮಫಲಕ ಅನಾವರಣ ನೆರವೇರಲಿದೆ ಎಂದು ಮದನಿ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಫತಾಕ್‌ ಹೇಳಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 1974 ರಲ್ಲಿ ಮದನಿ ಎಜ್ಯುಕೇಷನ್‌ ಎಸೋಸಿಯೇಶನ್‌ ಸಂಸ್ಥೆ ಆರಂಭಗೊಂಡಿದ್ದು, ಉಳ್ಳಾಲದಲ್ಲಿ ಪ್ರಥಮ ಮುಸ್ಲಿಂ ವಿದ್ಯಾಸಂಸ್ಥೆ ಹೆಗ್ಗಳಿಗೆ ಪಡೆದುಕೊಂಡಿದೆ. ಪ್ರಾಥಮಿಕ, ಹಿರಿಯ ಪ್ರಾಥಮಿಕ, ಮದನಿ ಪ್ರೌಢಶಾಲೆ, ಮದನಿ ಪದವಿಪೂರ್ವ ಕಾಲೇಜುಗಳು ಪ್ರಾರಂಭಗೊಂಡಿದೆ. ಜಾತಿ ಮತಗಳ ಬೇಧವಿಲ್ಲದೆ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡಿದ್ದಾರೆ. ದ.ಕ ಜಿಲ್ಲೆ ಹಾಗೂ ಕಾಸರಗೋಡು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಿರುವುದರಿಂದ ಈಗಿರುವ ಮೂಲಭೂತ ಸೌಕರ್ಯದ ಜೊತೆಗೆ ಇನ್ನೂ ಹೆಚ್ಚಿನ ಸೌಕರ್ಯಗಳ ವ್ಯವಸ್ಥೆ ಅನಿವಾರ್ಯವಾಗಿದೆ. ಮುಂದಿನ ವರ್ಷಗಳಲ್ಲಿ ಪಿಯುಸಿಗೆ ವಿಜ್ಞಾನ ವಿಭಾಗ, ಬ್ರೈಟ್‌ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ವಿಭಾಗವನ್ನು ಪ್ರೌಢವಿಭಾಗವಾಗಿ ಉನ್ನತೀಕರಿಸಲು ತರಗತಿ ಕೊಠಡಿ, ಕಂಪ್ಯೂಟರ್‌ ಲ್ಯಾಬ್‌, ಪ್ರಯೋಗಾಲಯ ಕೊಠಡಿಗಳ ನಿರ್ಮಾಣ ಕಾರ್ಯ ತುರ್ತಾಗಿ ಆಗಬೇಕಿರುವುದರಿಂದ ಎರಡನೇ ಮಹಡಿಯನ್ನು ನಿರ್ಮಿಸುವ ಯೋಜನೆಗೆ ಸುಮಾರು 1 ಕೋಟಿ 60 ಲಕ್ಷ ವೆಚ್ಚ ಆಗಲಿದ್ದು, ಇದರ ನೀಲಿ ನಕಾಶೆಯನ್ನು ಸಿದ್ದಗೊಳಿಸಲಾಗಿದೆ . ಸಹೃದಯಿಗಳು ಮಹತ್ತರವಾದ ಕಾರ್ಯಯೋಜನೆಯಲ್ಲಿ ಆಸಕ್ತಿ ವಹಿಸಿ ವಿಶೇಷ ಆರ್ಥಿಕ ಸಹಕಾರ ನೀಡಿ ಸಹಕರಿಸಬೇಕಾಗಿದೆ ಎಂದರು.
ಮದನಿ ಅಲುಮ್ನಿ ಉಪಾಧ್ಯಕ್ಷರಾದ ರೋಹಿತ್‌ ಉಳ್ಳಾಲ್‌ ಮಾತನಾಡಿ, ಡಿ.20 ರಂದು 2.30 ಯಿಂದ 5.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಡಿ.21 ರಂದು 9.30 ರಿಂದ 3 ರವರೆಗೆ ಸಾಂಸ್ಕೃತಿಕ ಬಳಿಕ ಶಂಕುಸ್ಥಾಪನೆ, ಮತ್ತೆ ಸಾಂಸ್ಕೃತಿಕ ಹಾಗೂ ಅಲ್ಯುಮ್ನಿ ಅಸೋಸಿಯೇಷನ್‌ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಡಿ.21 ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಯದ್‌ ಮದನಿ ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ. ಹನೀಫ್‌ ಹಾಜಿ ವಹಿಸಲಿದ್ದು ಕಟ್ಟಡಗಳ ನಾಮಫಲಕವನ್ನು ಹಾಗೂ ಶಂಕುಸ್ಥಾಪನೆಯನ್ನು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್‌ ನೆರವೇರಿಸಲಿದ್ದಾರೆ. ಸುವರ್ಣ ಮಹೋತ್ಸವದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದರು ಕ್ಯಾ. ಬ್ರಿಜೇಶ್‌ ಚೌಟ, ವಕ್ಫ್‌ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಝಮೀರ್‌ ಅಹಮ್ಮದ್‌ ಖಾನ್‌, ಪೌರಾಡಳಿತ ಸಚಿವ ರಹೀಂ ಖಾನ್‌, ವಿಧಾನಪರಿಷತ್‌ ಸದಸ್ಯರುಗಳಾದ ಮಂಜುನಾಥ ಭಂಡಾರಿ, ಐವನ್‌ ಡಿಸೋಜ, ಸಚಿವರುಗಳಾದ ಗೋವಿಂದರಾಜು, ನಾಸೀರ್‌ ಅಹಮ್ಮದ್‌, ಯು.ಬಿ.ವೆಂಕಟೇಶ್‌, ಕೆ.ಅಬ್ದುಲ್‌ ಜಬ್ಬಾರ್‌, ಕರ್ನಾಟಕ ಸ್ಟೇಟ್‌ ಅಲೈಡ್ ಕೌನ್ಸಿಲ್‌ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್‌ ಫರೀದ್‌, ಬಿ.ಎಂ.ಫಾರೂಕ್‌, ಇನಾಯತ್‌ ಆಲಿ, ಕಣಚೂರು ಯು.ಕೆ.ಮೋನು, ಡಾ.ಮೋಹನ್‌ ಆಳ್ವ, ಎ.ಜೆ.ಶೆಟ್ಟಿ, ರಿಯಾಝ್‌ ಬಾವ, ಹೆಚ್.ಕೆ.ಖಾದರ್‌, ಮೊಹಮ್ಮದ್‌ ಫರ್ಹಾದ್‌ ಯೆನೆಪೋಯ, ಉಳ್ಳಾಲ ನಗರಸಭೆ ಅಧ್ಯಕ್ಷೆ ಕೆ.ಶಶಿಕಲಾ ಭಾಗವಹಿಸಲಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಯು.ಹೆಚ್ುಮ್ಮರ್‌, ಉದ್ಯಮಿ ಮನ್ಸೂರ್‌, ಅಬ್ದುಲ್‌ ರವೂಫ್‌, ಆಸೀಫ್‌ ಸೂಫಿಖಾನ್‌, ದರ್ಗಾ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್‌ ರಶೀದ್‌, ಯು.ಎಸ್.‌ ಹಂಝ, ಕುಂಪಲ ನೂರಾನಿ ಯತೀಂಖಾನದ ಅಧ್ಯಕ್ಷ ಯು.ಎಸ್‌ ಅಬೂಬಕರ್‌, ಅಲ್ಯುಮ್ನಿ ಅಸೋಸಿಯೇಷನ್‌ ಅಧ್ಯಕ್ಷ ಮುನೀರ್‌ ಬಾವಾ ಉಪಸ್ಥಿತರಿರಲಿದ್ದಾರೆ.
ಆಚರಣೆಯ ವಿವಿಧ ಕಾರ್ಯಕ್ರಮಗಳು 2025ರ ವರ್ಷಪೂರ್ತಿ ಹಂತಹಂತವಾಗಿ ನಡೆಯಲಿದೆ. ಎಪ್ರಿಲ್‌ ತಿಂಗಳಿನಲ್ಲಿ ಅಂತರಾಷ್ಟ್ರೀಯ ಅಲುಮ್ನಿ ಕ್ರೀಡಾಕೂಟ ನಡೆಸಲು ಉದ್ದೇಶಿಸಲಾಗಿದೆ. 2025 ರ ಕೊನೇಯ ವರ್ಷದಲ್ಲಿ ಸುವರ್ಣ ಸಂಭ್ರಮವನ್ನು ಐತಿಹಾಸಿಕ ಸಂಭ್ರಮವಾಗಿ ಪೂರ್ವ ವಿದ್ಯಾರ್ಥಿಗಳ ಬೃಹತ್‌ ಸಮ್ಮೇಳನದೊಂದಿಗೆ ಕೊನೆಗೊಳ್ಳಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಮದನಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಲೋಕನಾಥ ರೈ, ಮದನಿ ಅಲುಮ್ನಿ ಮಹಿಳಾ ವಿಭಾಗ ಅಧ್ಯಕ್ಷೆ ಜೊಹರಾ ಇಬ್ರಾಹಿಂ ಕಾಸಿಂ, ಅಲುಮ್ನಿ ಪ್ರಧಾನ ಕಾರ್ಯದರ್ಶಿ ಮಂಗಳೂರ ರಿಯಾಝ್‌, ದಿನೇಶ್‌ ಶೆಟ್ಟಿ, ಕೋಶಾಧಿಕಾರಿ ಅಬ್ದುಲ್‌ ಅಝೀಝ್‌ ಉಪಸ್ಥಿತರಿದ್ದರು.

Exit mobile version