
ಕೊಣಾಜೆ: ತುಳುನಾಡು ದೈವ ದೇವರ ನಾಡು. ದೈವೀ ಕೃಪೆ ಇದ್ದರೆ ನಾವು ಜೀವನದಲ್ಲಿ ಯಶಸ್ಸನ್ನು ಕಾಣಬಹುದು. ದೈವ ದೇವರ ಆರಾಧನೆಯೊಂದಿಗೆ ನಮ್ಮ ತುಳುನಾಡಿನ ಸಾಂಪ್ರದಾಯಿಕ ಆಚರಣೆ ಹಾಗೂ ಸಂಸ್ಕೃತಿಯ ರಕ್ಷಣೆಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಮುಂಬಾಯಿಯ ಹೇರಂಬಾ ಇಂಡಸ್ಟ್ರೀಸ್ ನ ಸಂಸ್ಥಾಪಕರಾದ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅವರು ಹೇಳಿದರು.
ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಅಸೈಗೋಳಿಯಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್, ಅಯ್ಯಪ್ಪ ಸ್ವಾಮಿ ಸೇವಾ ಭಜನಾ ಮಂಡಳಿ, ಪರಂಜ್ಯೋತಿ ಮಾತೃ ಮಂಡಳಿ ಅಸೈಗೋಳಿ, ಸಂದ್ಯಾ ಭಜನಾ ಭಜನೋತ್ಸವ ಸಮಿತಿ ಅಸೈಗೋಳಿ ಇದರ ಸಂಯುಕ್ತ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಡೆದ ಭಜನಾ ಸಂಕೀರ್ತನೆಯ ಮಂಗಳೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಚಿಂತನೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಜೀವನದಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಉತ್ತಮತೆಯ ಮೂಲಕ ಜನರ ಪ್ರೀತಿಗಳಿಸುವುದು ಮುಖ್ಯ. ಮಹಾಲಕ್ಷ್ಮೀಯು ನಮಗೆ ಒಲಿಯಬೇಕಾದರೆ ಸರಸ್ವತಿಯ ಕೃಪೆಯೊಂದಿಗೆ ಪರಿಶ್ರಮ, ಪ್ರಯತ್ನಗಳು ಕೂಡಾ ಅತ್ಯಗತ್ಯ ಎಂದರು.
ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಋಷಿ ಸಂಪತ್ತು ,ಕೃಷಿ ಸಂಪತ್ತು ನಮ್ಮ ದೇಶದ ಮೂಲ ಪರಂಪರೆಯಾಗಿದ್ದು ಅದನ್ನು ನಾವು ಎಂದಿಗೂ ಮರೆಯಬಾರದು. ಬಹಳ ಮುಖ್ಯವಾಗಿ ಮಾತೆಯರು ನಮ್ಮ ಭಾರತೀಯ ಸಂಸ್ಕೃತಿ, ಸಂಸ್ಕಾರವನ್ನು ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ಟಿ.ಜಿ.ರಾಜಾರಾಂ ಭಟ್ ಅವರು ವಹಿಸಿ ಮಾತನಾಡಿ, ಅಸೈಗೋಳಿಯ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಭಕ್ತರ ಕೂಡುವಿಕೆಯೊಂದಿಗೆ 48 ದಿನಗಳ ಸಂಧ್ಯಾ ಭಜನೆಯ ಮೂಲಕ ಅನನ್ಯವಾದ ಧಾರ್ಮಿಕ ಪರಿಕಲ್ಪನೆ ಸಮಾಜಕ್ಕೆ ದೊರೆತಿದೆ. ಇಂತಹ ಧಾರ್ಮಿಕ ಕಾರ್ಯಗಳ ಮೂಲಕ ಹಿಂದೂ ಸಮಾಜದ ಒಗ್ಗಟ್ಟು ನೂರು ಕಾಲ ಮುಂದುವರಿಯಲಿ ಎಂದರು.ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಇವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ರವಿ ಶಂಕರ್ ಶೆಟ್ಟಿ
ಉದ್ಯಮಿ ಜಯರಾಮ ಶೆಟ್ಟಿ ಕಂಬಳಪದವು, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಸಾಮಾಜಿಕ ಮುಂದಾಳು ರಾಜೇಶ್ ಶೆಟ್ಟಿ ಪಜೀರುಗುತ್ತು, , ಟ್ರಸ್ಟ್ ಗೌರವ ಅಧ್ಯಕ್ಷರು ಸೀತಾರಾಂ ಶೆಟ್ಟಿ ನೆತ್ತಿಲಬಾಳಿಕೆ, ಕೋಟೆಕಾರ್ ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಪ್ರವೀಣ್ , ಸೋಮೇಶ್ವರ ಪುರಸಭೆ ಸದಸ್ಯೆ ಸ್ವಪ್ನ ಕೋಟೆಕಾರ್, ಟ್ರಸ್ಟಿ ರಮೇಶ್ ರೈ ಕೆಳಗಿನ ಮನೆ, ಉದ್ಯಮಿ ಪ್ರಜ್ವಿತ್, ಧಾರ್ಮಿಕ ಮುಂದಾಳು ಅನುಪ್ ವರ್ಕಾಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಮುರಳೀ ಕೊಣಾಜೆ, ಉದ್ಯಮಿ ಮಟನ್ ರಾಜ, ಗ್ರಂಥಪಾಲಕಿ ಜ್ಯೋತಿ ಕೊಟ್ಯಾನ್, ಸಂಧ್ಯಾ ಭಜನೋತ್ಸವ ಸಮಿತಿ ಅಧ್ಯಕ್ಷರಾದ ವಿಶ್ವನಾಥ ನಾಯ್ಕ್ , ಪರಂಜ್ಯೋತಿ ಮಾತೃ ಮಂಡಳಿ ಅಧ್ಯಕ್ಷೆ ನಾಗವೇಣಿ ಶೆಟ್ಟಿ , ಟ್ರಸ್ಟಿಗಳಾದ ಆನಂದ ಕೆ ಅಸೈಗೋಳಿ, ಪ್ರತಾಪ್ ಅಸೈಗೋಳಿ ಸೈಟ್, ಮಂಜುನಾಥ ಆಳ್ವ ತೇವುನಾಡು ಗುತ್ತು,ಚಂದ್ರಶೇಖರ್ ಶೆಟ್ಟಿ ಮಂಟಮೆ, ಚೇತನ್ ಅಸೈಗೋಳಿ, ವಸಂತ್ ಪಟ್ಟೋರಿ, ಕೃಷ್ಣಪ್ಪ ಕೆ ಕೆ ಎಸ್, ಪ್ರವೀಣ್ ಪಟ್ಟೋರಿ, ಗಣೇಶ್ ಅಸೈಗೋಳಿ ಸೈಟ್,ಶಿವಪ್ರಸಾದ್ ಕಕ್ಕೆಮಜಲು, ಭಾಸ್ಕರ್ ಮಂಜನಾಡಿ, ನಾಗೇಶ್ ಮಂಗಳಾನಗರ ಮೊದಲಾದವರು ಉಪಸ್ಥಿತರಿದ್ದರು.ಶ್ರೀಮತಿ ಸುಮನ ಗಿರೀಶ್ ಅಸೈಗೋಳಿ ಸೈಟ್ ಸನ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ 48 ದಿನಗಳ ಭಜನಾ ಕಾರ್ಯಕ್ರಮದಲ್ಲಿ ಸಹಕಾರ ನೀಡಿದವರನ್ನು ಅಭಿನಂದಿಸಲಾಯಿತು.
ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ರಾದ ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು.ಅಯ್ಯಪ್ಪ ಸ್ವಾಮಿ ಸೇವಾ
ಟ್ರಸ್ಟಿ ತ್ಯಾಗಂ ಹರೇಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ ವಂದಿಸಿದರು.