
ಉಳ್ಳಾಲ: ಮಂಗಳೂರು ನಗರ ಸಾರಿಗೆ ಬಸ್ಸುಗಳಿಗೆ ಬಾಗಿಲುಗಳನ್ನು ಅಳವಡಿಸಲು ಡಿ.10 ಕೊನೇಯ ದಿನಾಂಕ ಎಂದು ಜಿಲ್ಲಾಧಿಕಾರಿ ಮುಲ್ಲೆöÊ ಮುಹಿಲನ್ ಅವರು ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಗಡುವು ನೀಡಿದ್ದರೂ, ಕನಿಷ್ಠ ಒಂದು ಬಸ್ಸಿನವರು ಜಿಲ್ಲಾಧಿಕಾರಿ ಆದೇಶವನ್ನು ಪಾಲಿಸದೇ ಇದ್ದು, ಸಾರ್ವಜನಿಕರಿಂದ ಕಾನೂನು ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
2017ರಿಂದ ನೋಂದಣಿಯಾಗುವ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಾಗಿಲನ್ನು ಹೊಂದಿರಬೇಕು ಎಂದು ಕಾನೂನಿನಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಬಸ್ಸುಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಂದಿನ ಒಂದು ತಿಂಗಳೊಳಗೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಬಸ್ಸು ಮಾಲೀಕರು ಅಫಿಧಾವಿತ್ ಸಲ್ಲಿಸಬೇಕು ಎಂದು ಅವರು ಆರ್‌ಟಿಓಗೆ ಜಿಲ್ಲಾಧಿಕಾರಿಗಳು 2024ರ, ಫೆ.28 ರಂದು ಆದೇಶ ಹೊರಡಿಸಿದ್ದರು.
2022ರ ಸೆ.14 ರಂದು ಉಳ್ಳಾಲಬೈಲ್ ನಿವಾಸಿ , ಪಿಯುಸಿ ವಿದ್ಯಾರ್ಥಿ ಯಶರಾಜ್ ಕಾಲೇಜಿಗೆ ತೆರಳುವ ಸಂದರ್ಭ ನೇತ್ರಾವತಿ ಸೇತುವೆ ಸಮೀಪ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಸಾವಿನಲ್ಲೂ ಸಾರ್ಥಕ ಮೆರೆದಿದ್ದ ಯಶ್‌ರಾಜ್ ಅಂಗಾAಗಗಳನ್ನು ದಾನ ನಡೆಸಲಾಗಿತ್ತು. ಪ್ರಕರಣ ಬೆನ್ನಲ್ಲೇ ಉಳ್ಳಾಲವಾಣಿ ಲಿಖಿತವಾಗಿ ಜಿಲ್ಲಾಧಿಕಾರಿಗಳಿಗೆ ಬಸ್ಸುಗಳಿಗೆ ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸುವಂತೆ ಮನವಿ ಮಾಡಿತ್ತು. ಅಲ್ಲದೆ ಯಶರಾಜ್ ಹೆಸರಿನಲ್ಲಿ ಬಾಗಿಲುಗಳು ಶೀಘ್ರವೇ ಅಳವಡಿಕೆಯಾಗಬೇಕು ಅನ್ನುವ ಅಭಿಯಾನವನ್ನು ಆರಂಭಿಸಿತ್ತು. ಗೂಗಲ್ ಫಾರಂ ಮೂಲಕ ಮಂಗಳೂರು ಬಸ್ ಗಳಿಗೆ ಬಾಗಿಲುಗಳು ಬೇಕು-ಬೇಡ ಎಂದು ನಡೆಸಿದ ಅಭಿಯಾನಕ್ಕೇ ಜನರಿಂದ ಬೇಕು ಅನ್ನುವ ಹೆಚ್ಚಿನ ಅಭಿಪ್ರಾಯಗಳು ದಾಖಲೆಯಾಗಿತ್ತು. ಈ ನಡುವೆ 2023ರ ಅ.30 ರಂದು ನಂತೂರಿನ ಅಪಘಾತದಲ್ಲಿ ಬಸ್ ಬಾಗಿಲಿಲ್ಲದೆ ಬಸ್ ನಿರ್ವಾಹಕ ಬಾಗಲಕೋಟೆಯ ಈರಯ್ಯ (30) ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದರು.ಸೆ.12 ರಂದು ಮೂಡಬಿದ್ರೆ ಮಾರೂರು ಗ್ರಾಮದ ನೀಲಮ್ಮ (40) ಎಂಬವರು ಕುಂಟೋಡಿ ಎಂಬಲ್ಲಿ ಬಸ್ಸಿನಿಂದ ಹೊರಗೆಸೆಯಲ್ಪಟ್ಟು ಮೃತಪಟ್ಟಿದ್ದರು. ಫೆ. 9 ರಂದು ಉಪ್ಪಿನಂಗಡಿ ನಿನ್ನಿಕಲ್ ಸಮೀಪ ರಾಧಾ ನಿನ್ನಿಕಲ್ ಎಂಬವರು ತಾಯಿ ಮಗುವಿಗೆ ಸೀಟು ನೀಡಿ ನಿಲ್ಲುವ ಸಂದರ್ಭ ಹೊರಗೆಸೆಯಲ್ಪಟ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ನಾಲ್ವರು ಬಸ್ಸುಗಳಲ್ಲಿ ಸುರಕ್ಷತೆಗಾಗಿ ಬಾಗಿಲುಗಳಿಲ್ಲದೇ ಮೃತಪಟ್ಟಿದ್ದರು. ಈ ಕುರಿತು ಫೆ.28 ರಂದು ಜಿಲ್ಲಾಧಿಕಾರಿಗಳು ಆರ್ ಟಿಓಗೆ ಆದೇಶ ಹೊರಡಿಸಿದ್ದರು. ಇದೀಗ ಆದೇಶ ಹೊರಡಿಸಿ ಕೊನೇಯ ಗಡುವಾಗಿ ಡಿ.10ರ ದಿನಾಂಕವನ್ನು ನಮೂದಿಸಿದರೂ ಯಾವುದೇ ಬಸ್ಸುಗಳಿಗೆ ಬಾಗಿಲುಗಳನ್ನು ಹಾಕುವ ಪ್ರಕ್ರಿಯೆ ನಡೆಯದಿರುವುದು ಖೇದಕರ.
ಉಳ್ಳಾಲವಾಣಿ ಫೆ.27 ರಂದು ಬಾಗಿಲುಗಳ ಅಳವಡಿಕೆ ಕುರಿತು ಪ್ರಕಟಿಸಿದ್ದ ವರದಿ