Site icon Ullalavani

ಪ್ರೌಢಾವಸ್ಥೆ ವಿದ್ಯಾರ್ಥಿನಿಯರ ಗೊಂದಲಗಳನ್ನು ವೈದ್ಯರ ಶಿಬಿರಗಳಿಂದ ದೂರವಾಗಿಸಲು ಸಾಧ್ಯ : ಮಮತಾ ಡಿ.ಎಸ್ ಗಟ್ಟಿ

ಉಳ್ಳಾಲ: ಪ್ರೌಢಾವಸ್ಥೆಯಲ್ಲಿ ವಿದ್ಯಾರ್ಥಿನಿಯರು ಅನೇಕ ಸಮಸ್ಯೆಗಳನ್ನು ಎದುರಿಸುವುದು ಸಹಜ. ಈ ಕುರಿತು ಹೆತ್ತವರಲ್ಲಿ, ವೈದ್ಯರ ಜೊತೆಗೆ ಸಮಾಲೋಚಿಸಿದಾಗ ಪರಿಹಾರಗಳು ಸಿಗಲು. ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮಾದರಿ ಶಾಲೆ ಹರೇಕಳದ ವಿದ್ಯಾರ್ಥಿನಿಯರಿಗೆ ವೈದ್ಯರ ಜೊತೆಗೆ ಸಮಾಲೋಚನೆಗೆ ವೇದಿಕೆ ಕಲ್ಪಿಸಿಕೊಟ್ಟ ಲೈಫ್ ನೆಸ್ಟ್ ಸಂಸ್ಥೆಯ ಕಾರ್ಯ ಆರೋಗ್ಯಯುತ ಸಮಾಜಕ್ಕೆ ಪೂರಕ ಎಂದು ಗೇರು ಅಭಿವೃದ್ಧಿ ನಿಗಮ, ಕರ್ನಾಟಕ ಸರಕಾರದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಹೇಳಿದ್ದಾರೆ.


ಅವರು ಲೈಫ್ ನೆಸ್ಟ್ ಟ್ರಸ್ಟ್ ಮಂಗಳೂರು , ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆ , ಸಂಯುಕ್ತಾಶ್ರಯದಲ್ಲಿ ಹರೇಕಳದ ಶ್ರೀ ರಾಮಕೃಷ್ಣ ಹೈಸ್ಕೂಲ್ ನಲ್ಲಿ ಇವರ ಜಂಟಿ ಆಶ್ರಯ ದಲ್ಲಿ ಶ್ರೀ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ವಿದ್ಯಾರ್ಥಿ ನಿಯರಿಗಾಗಿ ಆರೋಗ್ಯ ಜಾಗೃತಿ ಯ ಕಾರ್ಯಕ್ರಮ ಹೆಲ್ತಿ ಹ್ಯಾಬಿಟ್ಸ್ ಮತ್ತು ನಿಶಬ್ಧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯದಲ್ಲಿ ಮುಂಜಾಗ್ರತಕಾ ಕ್ರಮಗಳನ್ನು ಅನುಸರಿಸಿದಾಗ ಆರೋಗ್ಯಯುತ ಜೀವನ ಸಾಧ್ಯ. ಮಾದರಿ ಶಾಲೆಯಾಗಿರುವ ಹರೇಕಳ ಶಾಲೆಯನ್ನು ಆಯ್ಕೆಗೊಳಿಸಿರುವ ಲೈಫ್ ನೆಸ್ಟ್ ಸಂಸ್ಥೆ ಕಾರ್ಯ ಶ್ಲಾಘನೀಯ. ಪ್ರೌಢಾವಸ್ಥೆಗೆ ಬರುವ ಸಮಯ, ಹಲವಾರು ವಿದ್ಯಾರ್ಥಿನಿಯರು ತಾಯಿ ಹೇಳುವುದನ್ನು ಕೇಳದವರೂ ಇದ್ದಾರೆ, ಕೇಳುವವರು ಇದ್ದಾರೆ. ಆ ಪ್ರಾಯದಲ್ಲಿ ಸಮಸ್ಯೆಗಳನ್ನು ಹೆತ್ತವರಲ್ಲಿ ಹೇಳುವವರು ಕಡಿಮೆ, ಸ್ನೇಹಿತರೊಂದಿಗೆ ಹಂಚಿಕೊAಡರೂ ಪರಿಹಾರಗಳು ಕಡಿಮೆ. ಆದರೆ ವೈದ್ಯರು, ಹೆತ್ತವರಲ್ಲಿ ಸಮಸ್ಯೆಗಳ ಕುರಿತು ಚರ್ಚಿಸಿದಾಗ ಪರಿಹಾರ ಕ್ರಮಗಳು ಸಾಧ್ಯ. ಮಾನಸಿಕ, ದೈಹಿಕವಾಗಿ ಆರೋಗ್ಯಯುತವಾಗಿರಲು ಆತಂಕಗಳನ್ನು ದೂರ ಮಾಡಿ, ಏಕಾಗ್ರತೆಗಳನ್ನು ಅನುಸರಿಸಿಕೊಂಡು ಆದರ್ಶ ನೀತಿಗಳನ್ನು ಹಾಗೂ ವೈದ್ಯರು, ಶಿಕ್ಷಕರುಗಳಿಂದ ಸಿಗುವ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಯಶಸ್ಸಿನ ಮೈಲುಗಲ್ಲಿನ ಜೊತೆಗೆ ಆರೋಗ್ಯಯುತವಾಗಿ ಬಾಳಲು ಸಾಧ್ಯ ಎಂದರು.
ಹರೇಕಳ ಶ್ರೀ ರಾಮಕೃಷ್ಣ ಹೈಸ್ಕೂಲ್ ಇದರ ಸಂಚಾಲಕರಾದ ಕಡೆಂಜ ಸೋಮಶೇಖರ ಚೌಟ, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್ ಕೊಣಾಜೆ, ಶ್ರೀ ರಾಮಕೃಷ ಹರೇಕಳ ಶಾಲೆಯ ಮುಖ್ಯ ಶಿಕ್ಷಕಿ ಉಷಾಲತಾ ಎ. ಲೈಫ್ ನೆಸ್ಟ್ ಟ್ರಸ್ಟ್ ನ ಅಧ್ಯಕ್ಷರಾದ ಅಚಲ್ ಆರ್ ಎಂ, ಟ್ರಸ್ಟಿ ಯಶವಂತ್ ರಾವ್, ಕೆ.ಎಸ್ .ಹೆಗ್ಡೆ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ರಚನಾ ಎಸ್, ಸಂಪನ್ಮೂಲ ವ್ಯಕ್ತಿಗಳಾಗಿ ಕ್ಷೇಮ ಆಸ್ಪತ್ರೆಯ ಮನೋಶಾಸ್ತç ವಿಭಾಗದ ತಜ್ಞರಾದ ಡಾ. ಶ್ರೀನಿವಾಸ್ ಭಟ್, ಡಾ. ನಿವೇದಾ ರಮೇಶ್ ಮತ್ತು ಆಗ್ನಿತಾ ಐಮನ್ ಉಪಸ್ಥಿತರಿದ್ದರು. ಶಬ್ದ ಮಾಲಿನ್ಯ ದಿಂದ ಆಗುವ ಸಮಸ್ಯೆಯ ಬಗ್ಗೆ ಕೆ.ಎಸ್ .ಹೆಗ್ಡೆ ಆಸ್ಪತ್ರೆಯ ಈಎನ್ ಟಿ ವಿಭಾಗದ ಡಾ.ಶ್ರವಣ್ ಆಳ್ವ ಮಾಹಿತಿ ನೀಡಿದರು. ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ತ್ಯಾಗಂ ಹರೇಕಳ ಸ್ವಾಗತಿಸಿ , ನಿರೂಪಿಸಿದರು.

ಪ್ರಶ್ನೆಗಳಿಗಾಗಿ ಪೆಟ್ಟಿಗೆ !
ವಿದ್ಯಾರ್ಥಿನಿಯರಲ್ಲಿ ಇರುವ ಪ್ರಶ್ನೆಗಳನ್ನು ಖಾಸಗಿತನ ಕಾಪಾಡುವ ಸಲುವಾಗಿ ಲೈಫ್ ನೆಸ್ಟ್ ಸಂಸ್ಥೆ ಒಂದು ವಾರದ ಹಿಂದೆಯೇ ಶಾಲೆಯಲ್ಲಿ ಪ್ರಶ್ನೆಗಳಿಗಾಗಿ ಪೆಟ್ಟಿಗೆಯನ್ನು ಇರಿಸಿತ್ತು. ಸುಮಾರು 50 ಕ್ಕೂ ಅಧಿಕ ವಿದ್ಯಾರ್ಥಿನಿಯರು ತಮ್ಮ ಪ್ರಶ್ನೆಗಳನ್ನು ಬಾಕ್ಸ್ ನಲ್ಲಿ ಹಾಕಿದ್ದು, ಅದನ್ನು ವೈದ್ಯರಿಗೆ ತಲುಪಿಸುವ ಮೂಲಕ ಇಂದು ಆರೋಗ್ಯ ಜಾಗೃತಿ ಶಿಬಿರದಲ್ಲಿ ಪ್ರಶ್ನೆಗಳಿಗೆ ಪರಿಹಾರ ಕ್ರಮಗಳನ್ನು ವೈದರ ತಂಡ ನೀಡಿತು.

`ಲೈಫ್ ನೆಸ್ಟ್ ಸಂಸ್ಥೆ ಈ ಹಿಂದೆ ಸೀಡ್ ಬಾಲ್ ಮೂಲಕ ಹರೇಕಳ ಶಾಲೆಯಲ್ಲೇ ಕಾರ್ಯಕ್ರಮವನ್ನು ನೂತನ ಶೈಲಿಯಲ್ಲಿ ಆಯೋಜಿಸಿತ್ತು. ಇದೀಗ ಎರಡನೇಯದಾಗಿ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಜಾಗೃತಿಯನ್ನು ಹಮ್ಮಿಕೊಂಡಿದೆ. ಪ್ರಥಮಥವಾಗಿ ಹರೇಕಳ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗಿದ್ದು, ಮುಂದೆ ಗ್ರಾಮಾಂತರ ಭಾಗದ ಸರಕಾರಿ, ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಸಹಕಾರವಾಗುವಂತೆ ಜಾಗೃತಿ ಶಿಬಿರಗಳನ್ನು ಆಯೋಜಿಸಲಿದೆ’.
ತ್ಯಾಗಂ ಹರೇಕಳ

Exit mobile version