
ಉಳ್ಳಾಲ: ಇತ್ತೀಚೆಗೆ ಫಲಾಹ್ ಪ್ರೌಢಶಾಲೆ ತಲಪಾಡಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಉತ್ಸವದಲ್ಲಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಲಾವಣ್ಯ, ದೀಕ್ಷಿತಾ, ಪ್ರಜನ್ಯ, ಸನಿಧ್ಯಾ, ಅನನ್ಯ, ಶಬರಿ, ಪ್ರಜ್ವಲ್,ಸನತ್, ಸುಜನ್, ಪ್ರಣಾಮ್ ಮುಂತಾದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು ಹಾಗೂ ಈ ಸಂದರ್ಭದಲ್ಲಿ ತರಬೇತು ಶಿಕ್ಷಕರುಗಳಾದ ತ್ಯಾಗಮ್ ಹರೇಕಳ, ಸ್ಮಿತಾ, ರವಿಶಂಕರ್ ಇವರುಗಳು ಉಪಸ್ಥಿತರಿದ್ದರು. ಇವರುಗಳಿಗೆ ವಿದ್ಯಾ ಸಂಸ್ಥೆ ಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.