Site icon Ullalavani

ಉಚ್ಚಿಲ‌ ಅಂಡರ್ ಪಾಸ್ ಗೆ ನೀರು ನುಗ್ಗಿ ಅವಾಂತರ

ಉಳ್ಳಾಲ: ಮಂಗಳೂರಿನಲ್ಲೂ ಫೆಂಗಲ್ ಚಂಡಮಾರುತದ ಅಬ್ಬರದ ಹಿನ್ನಲೆ ಸೋಮವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ  ಭಾರೀ ಮಳೆಗೆ ಕೇರಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ  66 ರ ಹಲವಡೆ ಜಲಾವೃತವಾಗಿದೆ.

ಕೇರಳ ಗಡಿಭಾಗದ ತಲಪಾಡಿ, ಉಚ್ಚಿಲ, ಉಳ್ಳಾಲ, ಕೋಟೆಕಾರಿನಲ್ಲಿ ರಾತ್ರಿ ಇಡಿ ಎಡೆಬಿಡದೇ ಮಳೆ ಸುರಿಯುತ್ತಿದ್ದು ಉಚ್ಚಿಲ ಬಳಿ ಭಾರೀ ಮಳೆಗೆ ಅಂಡರ್ ಪಾಸ್ ಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಯಾಗಿದೆ.

ಅಂಡರ್ ಪಾಸ್ ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿದ ಪರಿಣಾಮ ಕಾರು  ದ್ವಿಚಕ್ರ ವಾಹನಗಳು ಅಂಡರ್ ಪಾಸ್ ನಲ್ಲಿ ಸಾಗಲು ಸಾಧ್ಯವಾಗದೇ ವಾಹನಗಳನ್ನು ತಳ್ಳಿಕೊಂಡು  ಸವಾರರು ಮುಂದೆ ಸಾಗುವಂತಾಗಿದೆ. ಹೆದ್ದಾರಿ ಬದಿಗಳಲ್ಲೂ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

Exit mobile version