ಕೋಟೆಕಾರು : ಚಂಡಾಮಾರುತದ ಪರಿಣಾಮ ತೀವ್ರವಾಗಿ ಮಳೆಯಾಗುತ್ತಿದ್ದು, ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯುದ್ದಕ್ಕೂ ನಡೆಯುತ್ತಿದ್ದು, ಎಲ್ಲೆಡೆ ಮಣ್ಣು ಅಗೆದು ಹಾಕಿರುವುದರಿಂದ ಪಾದಚಾರಿಗಳು, ವಾಹನ ಸವಾರರು ಜಾಗರೂಕರಾಗಿರಬೇಕಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೋಟೆಕಾರು, ಬೀರಿ, ಮಾಡೂರು, ಮಡ್ಯಾರ್, ಪಾನೀರು, ದೇರಳಕಟ್ಟೆವರೆಗಿನ ಮುಖ್ಯರಸ್ತೆ ಬದಿಯಲ್ಲಿ ಪೈಪ್ ಅಳವಡಿಸಲು ಮಣ್ಣು ಅಗೆಯಲಾಗಿದೆ. ತೀವ್ರ ಮಳೆಯಿಂದಾಗಿ, ರಸ್ತೆಬದಿಯಲ್ಲಿ ಹಲವೆಡೆ ಮಣ್ಣು ಶೇಖರಣೆಯಾಗಿದ್ದರೆ, ಇನ್ನು ಹಲವೆಡೆ ಪೈಪ್ ಅಳವಡಿಸಿದ ಬಳಿಕ ಮಣ್ಣು ಮೃದುವಾಗಿದೆ. ಇದರಿಂದಾಗಿ ವಾಹನ ಸವಾರರು ಜಾಗರೂಕರಾಗಿ ಚಲಿಸುವಂತೆಯೂ, ಪಾದಚಾರಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟೆಕಾರು ಗ್ರಾಮಸ್ಥರೇ ಎಚ್ಚರ
