Site icon Ullalavani

ತೊಕ್ಕೊಟ್ಟು ಜಂಕ್ಷನ್ನಿನ ಅವ್ಯವಸ್ಥೆಯನ್ನು ಕೇಳುವವರಿಲ್ಲದಂತಾಗಿದೆ: ವಸಂತ ಆಚಾರಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಪಕ್ಷಗಳ ಆಡಳಿತ ನಡೆದು ಕೈಗಾರಿಕೋದ್ಯಮಿಗಳ ಬೆಳವಣಿಗೆಗಳಾಗುತ್ತಿದೆಯೇ ಹೊರತು, ತೊಕ್ಕೊಟ್ಟು ಜಂಕ್ಷನ್ನಿನ ಅವ್ಯವಸ್ಥೆಯನ್ನು ಕೇಳುವವರಿಲ್ಲದಂತಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ.

ಅವರು ತೊಕ್ಕೊಟ್ಟು ಮತ್ತು ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿನ ಅವ್ಯವಸ್ಥೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿಸಿ ಸಿಪಿಐಎಂ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ  ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಚೀನಾ ದೇಶವನ್ನು ಹಿಂದಿಕ್ಕುವ ಭರದಲ್ಲಿ ದೇಶದ ಅಭಿವೃದ್ಧಿ ಕುಂಠಿತ ಆಗುತ್ತಿದೆ. ಬಂಡವಾಳಶಾಹಿಗಳಿಗೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆಯನ್ನು ಮೋದಿ ಸರಕಾರ ಮಾಡುತ್ತಲೇ ಬಂದಿದೆ. ಬಡಜನರ ಅಭಿವೃದ್ಧಿಯ ಹೆಸರಿನಲ್ಲಿ ಮತ ಪಡೆದುಕೊಂಡು ಬಿಜೆಪಿಗೆ ಪೂರಕವಾಗಿ ಸಂಘಪರಿವಾರದ ಎಲ್ಲಾ ವಿಭಾಗಗಳನ್ನು ಕೇಂದ್ರ ಸರಕಾರ ಕ್ರೂಢೀಕರಣ ನಡೆಸುವಲ್ಲಿ ಬ್ಯುಸಿಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಪ್ರಚಾರ ಮಾತ್ರ ನಡೆಯುತ್ತಿದೆ. ಉಳ್ಳಾಲ ನಗರಸಭೆಯ ತೊಕ್ಕೊಟ್ಟು ಪ್ರದೇಶದಲ್ಲಿ ಅಭಿವೃದ್ಧಿ ಕುಂಠಿತವಾಗಿ ಸಾರ್ವಜನಿಕರು ತೊಂದರೆಗೀಡಾದರೂ ಅದನ್ನು ಸರಿಪಡಿಸುವ ವ್ಯವಸ್ಥೆ ಚುನಾಯಿತ ಪ್ರತಿನಿಧಿಗಳಿಂದ ಆಗದೇ ಇರುವುದು ಖಂಡನೀಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಿಪಿಐಎಂ ಉಳ್ಳಾಲ ಪುರಸಭಾ ಸಮಿತಿ ಕಾರ್ಯದರ್ಶಿ ಪದ್ಮಾವತಿ.ಯಸ್.ಶೆಟ್ಟಿ ವಹಿಸಿದ್ದರು. ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಸಿಪಿಐಎಂ ಮಂಗಳೂರು ನಗರ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕೋಟೆಕಾರು ಲೋಕಲ್ ಕಮಿಟಿ ಕಾರ್ಯದರ್ಶಿ ಬಾಬು ಪಿಲಾರ್, ಮುನ್ನೂರು ಲೋಕಲ್ ಕಮಿಟಿಯ ಜನಾರ್ದನ.ಕೆ, ಉದ್ಯಮಿ ರಮೇಶ್ ಮೆಂಡನ್, ಅರುಣ್ ಕುಮಾರ್ ತೊಕ್ಕೊಟ್ಟು, ವಿಲಾಸಿನಿ ತೊಕ್ಕೊಟ್ಟು, ವಿಶ್ವನಾಥ ಶೆಟ್ಟಿ, ಲಕ್ಷ್ಮಣ ಕೆರೆಬೈಲು, ಸುಂದರ ಕುಂಪಲ, ಜನಾರ್ಧನ ಕುತ್ತಾರ್, ಚಂದ್ರಹಾಸ್ ಪಿಲಾರ್, ನಳಿನಾಕ್ಷಿ.ಯು.ಬಿ, ಮಾರಪ್ಪ, ಬೇಬಿ ಕಲ್ಲಾಪು, ಹರೀಶ್ ಶೆಟ್ಟಿ ಗೋಪಾಲ ಬಂಡಿಕೊಟ್ಯ, ಹರ್ಷವರ್ಧನ, ಮಹಾಬಲ.ಟಿ.ದೆಪ್ಪೆಲಿಮಾರ್ ಮೊದಲಾದವರು ಉಪಸ್ಥಿತರಿದ್ದರು. ರೋಹಿದಾಸ್ ವಂದಿಸಿದರು.

Exit mobile version