Site icon Ullalavani

ವೈದ್ಯಕೀಯ ಮೌಲ್ಯಾಂಕನ ಶಿಬಿರದ ಮೂಲಕ ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವಾಗಿದೆ: ಡಿಡಿಪಿಐ ವೆಂಕಟೇಶ್ ಪಟಗಾರ್

ಮಂಗಳೂರು: ವಿಶೇಷ ಚೇತನ ಮಕ್ಕಳನ್ನು ಒಗ್ಗೂಡಿಸಿ ಅವರಲ್ಲಿರುವ ನ್ಯೂನ್ಯತೆಗಳ ಪಟ್ಟಿ ಮಾಡಿ ಅವಶ್ಯಕತೆಯಿರುವ ಸಲಕರಣೆಗಳ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಶಿಕ್ಷಣ ಇಲಾಖೆ ದಾನಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಜತೆಗೆ ಸೇರಿಕೊಂಡು ಸಮಾಜಮುಖಿಯಾದ ಕಾರ್ಯವನ್ನು ಆಯೋಜಿಸಿರುವುದು ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪೂರಕ ಎಂದು ಡಿಡಿಪಿಐ ವೆಂಕಟೇಶ್ ಪಟಗಾರ್ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ದ.ಕ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದ್ರೆ ವಲಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ನದ ಮಾರುತಿ ಜನಸೇವಾ ಸಂಘ , ಮಾರುತಿ ಯುವಕ ಮಂಡಲ ಆಶ್ರಯದಲ್ಲಿ ಲೇಡಿಹಿಲ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ವಿಕಲ ಚೇತನ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ 2024-2025 ದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶೇಷ ಚೇತನ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಇಡೀ ತಂಡದ್ದಾಗಿದೆ. ಮೂರು ವಲಯದಿಂದ ಭಾಗವಹಿಸಿದ ವಿಶೇಷ ಚೇತನ ಮಕ್ಕಳು ಶಿಬಿರದ ಪ್ರಯೋಜಗಳನ್ನು ಪಡೆಯುವಂತಾಗಲಿ. ಸಹಕರಿಸಿದ ಎಲ್ಲಾ ಸಂಘಸAಸ್ಥೆಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಮಾರುತಿ ಯುವಕ ಮಂಡಲದ ಪ್ರಧಾನ ಕಾರ‍್ಯದರ್ಶಿ ಕಪಿಲ್ ಎಸ್. ಬಂಗೇರ ಮಾತನಾಡಿ, ಮಾರುತಿ ಜನಸೇವಾ ಸಂಘ 40ರ ಸಂಭ್ರಮದಲ್ಲಿ 40 ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ರೂಪುರೇಷಯನ್ನು ಇಟ್ಟುಕೊಂಡಿದೆ. ಈಗಾಗಲೇ ಶವ ಸುರಕ್ಷತಾ ಪೆಟ್ಟಿಗೆ ಹಾಗೂ ಶವ ಸ್ನಾನದ ಕವಚವನ್ನು ಸಮಾಜಕ್ಕೆ ಅರ್ಪಿಸಿದೆ. ಇದು ಎರಡನೇಯ ಕಾರ್ಯಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ, ಬೃಹತ್ ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ನಿರಾಶ್ರಿತರಿಗೆ ಉಚಿತ ಮನೆಯ ನಿರ್ಮಾಣ ಹಾಗೂ ಅಂತರಾಷ್ಟಿçÃಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ಮದುವೆ ಹಾಗೂ ಮನೆ ನಿರ್ಮಾಣದಲ್ಲಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಅಧ್ಯಕ್ಷರ ಜತೆಗೆ ಮಾಹಿತಿ ನೀಡಬಹುದು ಎಂದರು.

ವೆನ್ಲಾಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರಸಾದ್ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನಾ ಸಲಕರಣೆಗಳನ್ನು ವಿತರಿಸುವ ಸಲುವಾಗಿ ನಡೆಯುತ್ತಿರುವ ಕಾರ್ಯಕ್ರಮವಾಗಿದೆ. ದೈಹಿಕ, ಕಣ್ಣಿನ, ಕಿವಿ ನ್ಯೂನ್ಯತೆಗಳಿರುವ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ, ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬದ ಮಕ್ಕಳಿಗೆ ಶಿಬಿರದ ಪ್ರಯೋಜನ ಪಡೆಯಬಹುದು. ವಾರ್ಷಿಕ ಆದಾಯ ಎರಡೂವರೆ ಲಕ್ಷದ ಒಳಗಡೆ, ಬಿಪಿಎಲ್ ಕಾರ್ಡು, ಯುಐಡಿ ಸರ್ಟಿಫಿಕೇಟ್ ಹೊಂದಿರುವ ಮಕ್ಕಳಿಗೆ ಸಲಕರಣೆಗಳು ಲಭಿಸಲಿದೆ ಎಂದರು.

ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ಉತ್ತರ ಜೇಮ್ಸ್ ಕುಟಿನ್ಹಾ, ದಕ್ಷಿಣ ವಲಯದ ಈಶ್ವರ್, ಎಪಿಸಿ ವಿದ್ಯಾ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳಾದ ಮಂಗಳೂರು ಉತ್ತರ ವೇದಾವತಿ ರಾವ್, ದಕ್ಷಿಣ ಸುಷ್ಮಾ, , ಮಾರುತಿ ಯುವಜನ ಸಂಘದ ಪ್ರಧಾನ ಸಂಚಾಲಕ ಸುಧೀರ್‌ ವಿ.ಅಮೀನ್‌, ಅಧ್ಯಕ್ಷರಾದ ಸಂದೀಪ್ ಉಳ್ಳಾಲ್, ಗೌರವಾಧ್ಯಕ್ಷ ವರದರಾಜ್ ಪಿ. , ಕರ್ನಾಟಕ ಸರಕಾರಿ ಶಿಕ್ಷಕರ ನೌಕರರ ಸಂಘದ ಮಂಗಳೂರು ತಾಲೂಕು ಅಧ್ಯಕ್ಷ ಜಯರಾಮ್, ಪದಾಧಿಕಾರಿಗಳಾದ ನಾಗರಾಜ್ ಎಂ., ಫ್ಲೇವಿ, ಬಿಐಇಆರ್ ಟಿ ಸಂಘದ ಕಾರ‍್ಯದರ್ಶಿ ಕಿಶೋರಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭರತ್, ಅಲಿಮ್ಕೋ ಸಂಸ್ಥೆಯ ವಿಕ್ರಮ್, ವಿ ಪವರ್ ರೇಂಜರ್ಸ್‌ ನ ಅನುಪಮಾ ಮತ್ತು ನಿವೇದಿತಾ ಶೆಟ್ಟಿ, ಮುಖ್ಯಶಿಕ್ಷಕಿ ಸಿಸ್ಟರ್ ಐವಿ, ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕ ರಮೇಶ್ ಆಚಾರ್ ಸ್ವಾಗತಿಸಿದರು. ನಾಗರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಮೀಳಾ ನಿರೂಪಿಸಿದರು. ವೇದಾವತಿ ರಾವ್ ವಂದಿಸಿದರು. ಮಂಗಳೂರು ಉತ್ತರ, ದಕ್ಷಿಣ , ಮೂಡಬಿದ್ರೆ ವಲಯದ 250 ಶಿಬಿರಾರ್ಥಿಗಳು ಭಾಗವಹಿಸಿದ್ದರು.

Exit mobile version