Site icon Ullalavani

ಮೂಲ ಸಂಸ್ಕೃತಿಗಳು ಮರೆಯಾಗದಂತೆ ಗ್ರಾಮಡೊಂಜಿ ಗೌಜಿ ಕಾರ್ಯಕ್ರಮ ಪೂರಕ: ವಿವೇಕ್ ಶೆಟ್ಟಿ ಬೊಳ್ಯಗುತ್ತು

ಉಳ್ಳಾಲ: ಮುನ್ನೂರು ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ ಬಂದಿರುವುದರಿಂದ ಶಿಕ್ಷಣ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳಾಗಿವೆ. ಶಿಕ್ಷಣದ ಕಾಶಿಯಾಗಿ ಪ್ರದೇಶ ಮಾರ್ಪಾಡಾದರೂ, ಹೊರಗಿನಿಂದ ಬರುವ ಜನರಿಂದ ಮೂಲ ಸಂಸ್ಕೃತಿಗಳ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಸೌಹಾರ್ದಯುತ ವಾತಾವರಣದ ಜೊತೆಗಿನ ಸಂಸ್ಕೃತಿ ಅರಿವು ಮೂಡಿಸುವ ಗ್ರಾಮಡೊಂಜಿ ಗೌಜಿ ಕಾರ್ಯಕ್ರಮ ಸಮಾಜಕ್ಕೆ ಪೂರಕ ಎಂದು ಗ್ರಾಮಡೊಂಜಿ ಗೌಜಿ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಬಿ. ವಿವೇಕ್ ಶೆಟ್ಟಿ ಬೊಳ್ಯಗುತ್ತು ಹೇಳಿದರು.
ಅವರು ಸೌಹಾರ್ದ ಕಲಾವಿದರು ಕುತ್ತಾರು, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ, ಮುನ್ನೂರು ಯುವಕ ಮಂಡಲ , ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆ ಇದರ ಜಂಟಿ ಸಹಯೋಗದಲ್ಲಿ ದೆಪ್ಪೆಲಿಮಾರು ಗದ್ದೆಯಲ್ಲಿ ಜರಗಿದ ಮುನ್ನೂರು ಗ್ರಾಮಡೊಂಜಿ ಗೌಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಆರಂಭಿಸುವುದು ಸುಲಭ, ಆದರೆ 15 ವರ್ಷಗಳ ಕಾಲ ಅದನ್ನು ಮುನ್ನಡೆಸುವುದು ಬಹುದೊಡ್ಡ ಕಾರ್ಯ. ವೇದಿಕೆಯಲ್ಲಿ ಎಲ್ಲಾ ಧರ್ಮೀಯರು, ಮೇಲು-ಕೀಳು ಅನ್ನುವ ಭಾವನೆಯಿಲ್ಲದೆ ಭಾಗವಹಿಸುವ ವಿಶಿಷ್ಟವಾದ ಕಾರ್ಯಕ್ರಮ. ಶೇ.80 ಹೊರಗಿನವರೇ ಇರುವಾಗ ಮೂಲ ಗ್ರಾಮದವರು ಶೇ.20 ಮಂದಿ ಮಾತ್ರ ಇರುತ್ತಾರೆ. ಹಾಗಾಗಿ ಮೂಲ ಸಂಸ್ಕೃತಿಯಾದ ಕೃಷಿ ಪರಂಪರೆಯ ವಿಚಾರಧಾರೆಗಳನ್ನು ಜನರ ಅರಿವಿಗೆ ತರುವ ಕಾರ್ಯಕ್ರಮವಾಗಿದೆ. ಸೌಹಾರ್ದತೆಗೆ ಪೂರಕವಾಗುವ ಯೋಜನೆಗಳನ್ನು ಸರಕಾರ ನಡೆಸಬೇಕಾಗಿದ್ದರೂ, ಸರಕಾರದ ಕಾರ್ಯಕ್ರಮವನ್ನು ಮುನ್ನೂರು ಗ್ರಾಮಸ್ಥರು ನಡೆಸಿದ್ದಾರೆ ಎಂದರು.
ಮಾಜಿ ಪಂಚಾಯತ್ ಸದಸ್ಯ ಮುಸ್ತಾಫ ಕುತ್ತಾರ್ ಮಾತನಾಡಿ , 80 ರ ದಶಕದಲ್ಲಿ ಗ್ರಾಮದ ಒಗ್ಗಟ್ಟು, ಸಂಸ್ಕೃತಿ ಅನ್ಯೋನ್ಯತೆಯಿಂದ ಇತ್ತು. ಅಂತಹ ಸನ್ನಿವೇಶವನ್ನು ಮರುಸೃಷ್ಟಿಸಲು ಇಂತಹ ಸೌಹಾರ್ದಯುತ ಕಾರ್ಯಕ್ರಮದಿಂದ ಸಾಧ್ಯ. . ಯುವಸಮುದಾಯ, ಮಹಿಳೆಯರು ಕಷ್ಟಕಾಲದಲ್ಲಿ ಬೆಳೆದು ಶಿಕ್ಷಣ ಪಡೆದುಕೊಂಡವರು. ಅವರೆಲ್ಲರನ್ನು ಸ್ಮರಿಸುತ್ತಾ ಮುಂದಿನ ಪೀಳಿಗೆಯೂ ಅದೇ ದಾರಿಯಲ್ಲಿ ನಡೆದು ಜೀವನದಲ್ಲಿ ಯಶಸ್ಸು ಕಂಡುಕೊಳ್ಳಿ ಎಂದರು.
ಮುನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷ ವಿಲ್ಫ್ರೆಡ್‌ ಡಿಸೋಜ ಮಾತನಾಡಿ, ಪ್ರತೀ ಧರ್ಮದ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಗ್ರಾಮದ ಸೌಹಾರ್ದತೆಯನ್ನು ಎತ್ತಿಹಿಡಿದಿದ್ದಾರೆ. ಗದ್ದೆಯಲ್ಲಿ ಆಡುವ ಮೂಲಕ ಆರೋಗ್ಯದ ದೃಷ್ಟಿಯಿಂದ ಒಳಿತು ಎಂದರು.
ಗ್ರಾಮಡೊಂಜಿ ಗೌಜಿ ಸ್ವಾಗತ ಸಮಿತಿ ಅಧ್ಯಕ್ಷರು ರಘುಪತಿ ಡಿ ಕುತ್ತಾರ್ ಮಾತನಾಡಿ, ವಿವಿದೆಡೆ ಜಾತಿ, ಸಮುದಾಯಕ್ಕೆ ಸೀಮಿತವಾದ ಕಾರ್ಯಕ್ರಮಗಳಾದರೆ, ಮುನ್ನೂರು ನಲ್ಲಿ ಎಲ್ಲಾ ಧರ್ಮೀಯರು ಭಾಗವಹಿಸುವ ಕಾರ್ಯಕ್ರಮವಾಗಿದೆ.
ಹನುಮಾನ್ ಕ್ರೀಡಾಮಂಡಳಿ 6 ಎಕರೆ ಹಡಿಲುಬಿದ್ದ ಜಾಗದಲ್ಲಿ ಕೃಷಿಕಾಯಕ ನಡೆಸುತ್ತಿದೆ. ಇತರೆ ಮೂವರು ಸಂಘಗಳು ಸೇರಿಕೊಂಡು ಶ್ರಮದಾನವನ್ನು ನಡೆಸುತ್ತಾ ಬಂದಿದೆ. ಗ್ರಾಮದ ಉಪಾಧ್ಯಕ್ಷ ಮಹಾಬಲ ದೆಪ್ಪೆಲಿಮಾರ್ ಎಲ್ಲರ ಜೊತೆಗೂ ಉತ್ತಮ ಸಂಬಂಧ ಇರಿಸಿಕೊಂಡವರು. ಹಾಗಾಗಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಅವರ ಜವಾಬ್ದಾರಿ ಮಹತ್ತರವಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ, ಡಾ.ಜೀವನ್ ರಾಜ್ ಕುತ್ತಾರ್ , ಕೋಶಾಧಿಕಾರಿ ಪೃಥ್ವಿರಾಜ್, ಗೌರವ ಸಲಹೆಗಾರರಾದ ರವೀಂದ್ರನಾಥ್ ಪೂಂಜ, ಕೃಷ್ಣಪ್ಪ ಸಾಲ್ಯಾನ್ , ದೈವದ ಮೂಲ್ಯಣ್ಣ ಬಾಲಕೃಷ್ಣ ಸಾಲ್ಯಾನ್ ಕಂಪ , ರತ್ನಾಕರ್ ಕಾವ, ಗಣೇಶ್ ಟೈಲರ್, ವಿಕ್ಟರ್ ಲೋಬೊ, ಶ್ರೀಧರ್ ಸಾಲ್ಯಾನ್ , ಶಶೀಂದ್ರ ಕುಕ್ಯಾನ್, ದಯಾನಂದ ಪಿ.ಎಸ್, ಮುನ್ನೂರು ಗ್ರಾ.ಪಂ ಉಪಾಧ್ಯಕ್ಷರು ಮಹಾಬಲ ಟಿ.ದೆಪ್ಪೆಲಿಮಾರ್, ಜೈ ಹನುಮಾನ್ ಕ್ರೀಡಾ ಮಂಡಳಿ ಅಧ್ಯಕ್ಷರು ಚಂದ್ರಹಾಸ್, ಜೈ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷರು ಜಯರಾಮ್ ಕುತ್ತಾರ್, ಮುನ್ನೂರು ಯುವಕ ಮಂಡಲ ಅಧ್ಯಕ್ಷರು ಹರೀಶ್ ಮುಂಡೋಳಿ, ಸೌಹಾರ್ದ ಕಲಾವಿದರು ಕುತ್ತಾರು ಇದರ ನಿರ್ದೇಶಕರು ಮಿಥುನ್ ರಾಜ್, ಸಂಚಾಲಕ ವಂಶಿಕ್, ಅನ್ನಲಕ್ಷ್ಮಿ ಫೌಂಡೇಶನ್‌ನ ವಿಶಾಲಾಕ್ಷಿ ಕೊಟ್ಟಾರಿ, , ಪಂಚಾಯತ್ ಸದಸ್ಯರಾದ ರಾಜೇಶ್ವರಿ, ಭಾಸ್ಕರ್ ಕುತ್ತಾರ್, ಮತ್ತು ವಸಂತ್, ದಾಮೋದರ್ ಸಾಲ್ಯಾನ್, ಮಹಿಳಾ ಸಮಿತಿ ಅಧ್ಯಕ್ಷೆ ಸುಮಿತ್ರಾ, ಪದ್ಮನಾಭ ಶೆಟ್ಟಿ ಗೇಣಿಮನೆ , ನಾಗಪ್ಪ ಮೂಲ್ಯ ಮದಕ, ಜಯಂತ್ ನಾಯ್ಕ್, ರಘುರಾಮ್ ಶೆಟ್ಟಿ ಬೆರಿಕೆ, ವರದರಾಜ್ ಕೊಟ್ಟಾರಿ, ಸತೀಶ್ ಅಗೆಲ, ಗೀತಾ ಟೀಚರ್,ವಂಶಿಕ್ ಗಾಣದಮನೆ, ರಾಜೀವಿ ದೆಪ್ಪಲಿಮಾರ್, ಡಾ. ಜೀವನ್ ರಾಜ್ ಕುತ್ತಾರ್ ಸ್ವಾಗತಿಸಿದರು. ಹರೀಶ್ ಮುಂಡೋಳಿ ವಂದಿಸಿದರು. ರೂಪೇಶ್ ಕಂಪ ನಿರೂಪಿಸಿದರು. ಗ್ರಾಮಡೊಂಜಿ ಗೌಜಿ ದೆಪ್ಪಲಿಮಾರ್ ಗದ್ದೆಯಲ್ಲಿ ನಡೆಯಿತು.
ಕಂಬಳದ ಕೋಣವನ್ನು ಓಡಿಸುವ ಮೂಲಕ ಗದ್ದೆಯಲ್ಲಿನ ಕ್ರೀಡೆಗಳಿಗೆ ಚಾಲನೆ ನೀಡಲಾಯಿತು. ತಂಡ ವಿಭಾಗದಲ್ಲಿ ಹಗ್ಗಜಗ್ಗಾಟ, ಚೆಂಡೆಸೆತ, ರಿಲೇ ಹಾಗೂ ವೈಯಕ್ತಿಕ ವಿಭಾಗದಲ್ಲಿ ಕೆಸರಿನಲ್ಲಿ ಓಟ, ಉಪ್ಪುಮುಡಿ ಓಟ, ಮೀನು ಹಿಡಿಯುವುದು, ಮಡಕೆ ಒಡೆಯುವುದು, ಲಿಂಬೆ ಚಮಚ, ಸೋಗೆ ಎಳೆಯುವುದು, ಅಕ್ಕಿಮುಡಿ ಕಟ್ಟುವುದು, ಮೂಡೆ ಕಟ್ಟುವುದು, ಬೈಹುಲ್ಲಿನಲ್ಲಿ ಹಗ್ಗ ತಯಾರಿ, ತೆಂಗಿನ ಗರಿ ಆಕೃತಿ ರಚನೆ, ಮಣ್ಣಿನಾಕೃತಿ ರಚನೆ, ಬುಟ್ಟಿ ಹಣೆಯುವುದು, ತೆಂಗಿನ ಗರಿ ಹಣೆಯುವುದು, ನಿಧಿ ಶೋಧ ನಡೆಯಿತು.

Exit mobile version